Advertisement

KSRTC: ಮಂಗಳೂರು-ಧರ್ಮಸ್ಥಳ: ಹೆಚ್ಚಿನ ಬಸ್ಸು ಓಡಿಸಲು ಕ್ರಮ

01:32 AM Dec 11, 2024 | Team Udayavani |

ಬಂಟ್ವಾಳ: ಮಂಗಳೂರು-ಧರ್ಮಸ್ಥಳ ಮಧ್ಯೆ ಹಿಂದೆ 45 ಬಸ್ಸುಗಳಿದ್ದು, ಪ್ರಸ್ತುತ 50 ಬಸ್ಸುಗಳು ಸಂಚರಿಸುತ್ತಿವೆ. ಯಾವುದೇ ಟ್ರಿಪ್‌ಗ್ಳನ್ನು ಕಡಿತ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ಮಂಗಳೂರು-ಬಂಟ್ವಾಳ-ಧರ್ಮಸ್ಥಳ ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಕಡಿತ ಮಾಡಿ ವಿದ್ಯಾರ್ಥಿಗಳು ಸಹಿತ ನಿತ್ಯ ಪ್ರಯಾಣಿಕರಿಗೆ ಆಗಿರುವ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆಯೇ ಎಂಬ ಶಾಸಕ ರಾಜೇಶ್‌ ನಾೖಕ್‌ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.

ಶಕ್ತಿ ಯೋಜನೆ ಬಳಿಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಆಧಿಕಗೊಂಡಿದ್ದು, ಹೀಗಾಗಿ ಹೆಚ್ಚಿನ ಬಸ್ಸುಗಳಿಗೆ ಬೇಡಿಕೆ ಇದೆ. ನಿಗಮಕ್ಕೆ ಹೊಸ ಬಸ್ಸುಗಳ ಸೇರ್ಪಡೆ ಜತೆಗೆ ಸಿಬಂದಿಯ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದರ ಬಳಿಕ ಆವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next