Advertisement

ಇಸ್ರೋ ನ್ಯಾವಿಗೇಶನ್‌ ಸೆಟಲೈಟ್‌ ಯಶಸ್ವೀ ಉಡಾವಣೆ

06:55 PM Aug 31, 2017 | Team Udayavani |

ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಇದೀಗ ತನ್ನ ಎಂಟನೇ ಪರಿಭ್ರಮಣ ಉಪಗ್ರಹವನ್ನು (ಐಆರ್‌ಎನ್‌ಎಸ್‌ಎಸ್‌-1ಎಚ್‌) PSLV-C39 ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಿದೆ.

Advertisement

ಈ ಉಪಗ್ರಹವು ಈ ಹಿಂದಿನ ಐಆರ್‌ಎನ್‌ಎಸ್‌ಎಸ್‌-1ಎ ಪರಿಭ್ರಮಣ ಉಪಗ್ರಹಕ್ಕೆ ಬದಲಿಯಾಗಲಿದೆ. ಹಿಂದಿನ ಉಪಗ್ರಹದ ಎಲ್ಲ ಮೂರು ಅಣುಚಾಲಿಕ ಗಡಿಯಾರಗಳು ವಿಫ‌ಲವಾಗಿರುವುದರಿಂದ ಈ ಬದಲೀ ಉಪಗ್ರಹದ ಉಡಾವಣೆ ಅಗತ್ಯವಾಗಿದೆ.

ಇಸ್ರೋ ತನ್ನ ಜಾಗತಿಕ ಸ್ಪರ್ಧಿಗಳಿಗೆ ಬಲವಾದ ಸ್ಪರ್ಧೆಯನ್ನು ಕೊಡುವಷ್ಟು ಬಲಿಷ್ಠವಾಗಿದ್ದು ಅದರ ಬತ್ತಳಿಕೆಯಲ್ಲಿ ಹಲವಾರು ಬಗೆಯ ಉಪಗ್ರಹಗಳು ಸಜ್ಜಾಗಿವೆ. 

ಈ ನೂತನ ಉಪಗ್ರಹ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಾಗಿದ್ದು , ಈ ವರೆಗಿನ ಎಲ್ಲ 7 ಉಪಗ್ರಹಗಳ ವೆಚ್ಚ ಕೇವಲ 1,420 ಕೋಟಿ ರೂ.ಎಂಬುದೇ ಇದಕ್ಕೆ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next