Advertisement

ISRO: ಗಗನಯಾನ ವೆಲ್‌ಡೆಕ್‌ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ: ಇಸ್ರೋ ಮಾಹಿತಿ

11:53 PM Dec 10, 2024 | Team Udayavani |

ಹೊಸದಿಲ್ಲಿ: ಗಗನಯಾನಕ್ಕೆ ಬಳಸಲಾಗುವ ಬಾಹ್ಯಾಕಾಶ ನೌಕೆಯನ್ನು ಮರಳಿ ಪಡೆಯುವ “ವೆಲ್‌ ಡೆಕ್‌’ನ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮಂಗಳವಾರ ಇಸ್ರೋ ತಿಳಿಸಿದೆ.

Advertisement

ನೌಕಾಪಡೆಯ ಸಹಯೋಗದೊಂದಿಗೆ ಡಿ.6ರಂದು ವಿಶಾಖಪಟ್ಟಣದಲ್ಲಿರುವ ನೌಕಾನೆಲೆಯಲ್ಲಿ ಈ ಪರೀಕ್ಷೆಯನ್ನು ನಡೆಸಿದ್ದಾಗಿ ಸಂಸ್ಥೆ ಹೇಳಿದೆ.

ಬಾಹ್ಯಾಕಾಶಕ್ಕೆ ತೆರಳುವ ಗಗನಯಾನ ನೌಕೆಯು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಮುದ್ರಕ್ಕೆ ಬೀಳಲಿದೆ. ಬಳಿಕ ಈ “ವೆಲ್‌ ಡೆಕ್‌’ ಅನ್ನು ಅಳವಡಿಸಿದ ಹಡಗು ಸಮುದ್ರಕ್ಕೆ ತೆರಳಿ ನೌಕೆ, ಸಿಬ್ಬಂದಿಯನ್ನು ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಕರೆತರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next