Advertisement

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

11:21 PM Dec 18, 2024 | Team Udayavani |

ಬೆಳಗಾವಿ: ಮಾಜಿ ಸೈನಿಕರಿಗೆ ಗೌರವ ಸಮ್ಮಾನ ನೀಡಲು ಪ್ರತೀ ಜಿಲ್ಲೆಯಲ್ಲಿ ಭೂಮಿ ಬದಲು ಜವಾನ್‌ ಸಮ್ಮಾನ್‌ ಬಡಾವಣೆ ನಿರ್ಮಾಣ ಮಾಡಿ ಸೈನಿಕರಿಗೆ ನಿವೇಶನ ಕೊಡಲು ಸರಕಾರ ಉದ್ದೇಶಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ವಿಧಾನ ಪರಿಷತ್‌ದಲ್ಲಿ ಸದಸ್ಯ ಸಿ.ಎನ್‌. ಮಂಜೇಗೌಡರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯ ದಲ್ಲಿ 50 ಸಾವಿರಕ್ಕೂ ಅಧಿಕ ಮಾಜಿ ಸೈನಿಕರಿದ್ದು, 16,065 ಜನರು ಭೂ-ಮಂಜೂರಾತಿಗಾಗಿ ಅರ್ಜಿಸಲ್ಲಿಸಿದ್ದಾರೆ. ಇದರಲ್ಲಿ 6,783 ಅರ್ಜಿ ಗಳನ್ನು ವಿಲೇವಾರಿ ಮಾಡಲಾಗಿದೆ. ಮುಖ್ಯವಾಗಿ ಸರಕಾರಕ್ಕೆ ಜಾಗದ ಕೊರತೆ ತೀವ್ರವಾಗಿದೆ.

ಹೀಗಾಗಿ ಪ್ರತೀ ಜಿಲ್ಲೆಯಲ್ಲಿ ಜವಾನ್‌ ಸಮ್ಮಾನ್‌ ಬಡಾವಣೆ ನಿರ್ಮಾಣ ಮಾಡಿ ಕೊಡಲು ಉದ್ದೇಶಿಸಲಾಗಿದೆ ಎಂದರು.

ಈ ಸಂಬಂಧ ಅಧಿವೇಶನ ಮುಗಿದ ಅನಂತರ ಎಲ್ಲ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next