Advertisement

Satellite Launch Proba-3: ಇಂದು ಐರೋಪ್ಯ ಒಕ್ಕೂಟದ ಪ್ರೋಬಾ ಉಪಗ್ರಹ ನಭಕ್ಕೆ

04:08 AM Dec 04, 2024 | Team Udayavani |

ಹೊಸದಿಲ್ಲಿ: ಸೂರ್ಯನ ಕೋರೋನಾ ಭಾಗದ ಅಧ್ಯಯನಕ್ಕಾಗಿ ಐರೋಪ್ಯ ಒಕ್ಕೂಟ ಉಡಾವಣೆ ಮಾಡುತ್ತಿರುವ “ಪ್ರೋಬಾ-3′ ಉಪಗ್ರಹವನ್ನು ಬುಧ­ವಾರ ಇಸ್ರೋ ಉಡಾವಣೆ ಮಾಡಲಿದೆ.

Advertisement

ಅದಕ್ಕಾಗಿ ಮಂಗಳವಾರದಿಂದ ಕೌಂಟ್‌ಡೌನ್‌ ಶುರುವಾಗಿದೆ. ಗಮನಾರ್ಹ ಅಂಶವೆಂದರೆ 23 ವರ್ಷಗಳ ಬಳಿಕ ಮತ್ತೂಮ್ಮೆ ಉಪಗ್ರಹ ಉಡಾವಣೆಗೆ ಐರೋಪ್ಯ ಒಕ್ಕೂಟ ಭಾರತದ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪಿಎಸ್‌ಎಲ್‌ವಿ ರಾಕೆಟ್‌ ಬಳಕೆ ಮಾಡಿ ಈ ಉಪಗ್ರಹವನ್ನು ಬುಧವಾರ ಸಾಯಂಕಾಲ 4.06ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.

550 ಕೆ.ಜಿ. ತೂಕ­ವಿರುವ ಈ ಉಪಗ್ರಹವನ್ನು ಅಂಡಾ­ಕಾರದ ಕಕ್ಷೆಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಒಂದೇ ಉಪಗ್ರಹ­ವಾಗಿ ಇದನ್ನು ಉಡಾವಣೆ ಮಾಡಿ­ದರೂ ಸಹ ಬಾಹ್ಯಾಕಾಶದಲ್ಲಿ ಇದು 2 ಉಪಗ್ರಹವಾಗಿ ಭಾಗವಾಗಿ, ಒಂದು ಉಪಗ್ರಹದ ಎದುರು ಮತ್ತೂಂದು ಬಂದು ಗ್ರಹಣವನ್ನು ಸೃಷ್ಟಿಸಿ, ಸೂರ್ಯ ಕೊರೋನಾ ಭಾಗವನ್ನು ಇದು ಅಧ್ಯಯನ ಮಾಡಲಿದೆ ಎಂದು ಐರೋಪ್ಯ ಸ್ಪೇಸ್‌ ಏಜೆನ್ಸಿàಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next