Advertisement

ISRO; ಶೀಘ್ರ ದೇಸಿ ನ್ಯಾವಿಗೇಶನ್‌ ವ್ಯವಸ್ಥೆ ಜಾರಿ

12:53 AM Nov 10, 2024 | Team Udayavani |

ಹೊಸದಿಲ್ಲಿ: ತನ್ನದೇ ಆದ ನ್ಯಾವಿಗೇಶನ್‌ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿರುವ ಇಸ್ರೋ, ಶೀಘ್ರ ಜನರಿಗೆ ಈ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಹೇಳಿದೆ. ಇದಕ್ಕಾಗಿ 7 ನ್ಯಾವಿಗೇಶನ್‌ ಉಪಗ್ರಹಗಳನ್ನು ಉಡಾವಣೆ ಮಾಡಬೇಕಿದ್ದು, ಇದಾದ ಬಳಿಕ ಸಾರ್ವಜನಿಕರಿಗೆ ಸಿಗ್ನಲ್‌ಗ‌ಳು ಲಭ್ಯವಾಗ‌ಲಿದೆ ಎಂದು ಇನ್‌ಸ್ಪೇನ್‌ನ ಮುಖ್ಯಸ್ಥ ಪವನ್‌ ಗೋಯೆಂಕಾ ಹೇಳಿದ್ದಾರೆ.

Advertisement

2025ರ ಬಳಿಕ ಪ್ರತೀ ವರ್ಷ 12ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯನ್ನು ಭಾರತ ಹೊಂದಿದೆ. ಇದರಲ್ಲಿ 6 ಜಿಎಸ್‌ಎಲ್‌ವಿ ಉಡಾವಣೆಯಾಗಿರಲಿವೆ. ಭಾರತದಲ್ಲಿ ಬ್ಯಾಂಡ್‌-1 ನ್ಯಾವಿಗೇಶನ್‌ ವ್ಯವಸ್ಥೆ ಒದಗಿಸಲು 7 ಉಪಗ್ರಹಗಳ ಆವಶ್ಯಕತೆ ಇದೆ. ಈಗಾಗಲೇ 1 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಉಳಿದ 6 ಉಪಗ್ರಹಗಳನ್ನು ಶೀಘ್ರ ಉಡಾವಣೆ ಮಾಡುವ ಮೂಲಕ ಈ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತದ ವ್ಯವಸ್ಥೆ ಹೆಚ್ಚು ನಿಖರ: ಭಾರತದ ನ್ಯಾವಿಗೇಶನ್‌ ವ್ಯವಸ್ಥೆ, ಈಗಾ­ಗಲೇ ಜಗತ್ತಿನಲ್ಲಿರುವ ಎಲ್ಲ ವ್ಯವಸ್ಥೆಗಳಿ­ಗಿಂತ ಹೆಚ್ಚು ನಿಖರವಾಗಿರುತ್ತದೆ. 10 ಮೀ. ಅಂತರವನ್ನಷ್ಟೇ ಇದು ಹೊಂದಿರ­ಲಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next