ನಿನಗೆ ನನಗಿಂತ ಫ್ರೆಂಡ್ಸ್, ಆಟ ಮೋಜು ಮಸ್ತಿ ಇದೇ ಮುಖ್ಯವಾಯ್ತಾ? ಯಾಕ್ ಈ ರೀತಿ ನನಗೆ ನೋವಿನ ಮೇಲೆ ನೋವು ಕೊಡ್ತಾ ಇದೀಯಾ? ನಿನ್ನನ್ನ ಅತಿಯಾಗಿ ಪ್ರೀತಿಸಿದ್ದೇ ತಪ್ಪಾಯ್ತಾ? ಒಮ್ಮೆ ಯೋಚಿಸಿ ನೋಡೋ, ನೀನೇ ನನ್ನ ಪ್ರಪಂಚ ಅಂದುಕೊಂಡಿರೋ ನನ್ನ ಮೇಲೆ ಸ್ವಲ್ಪವಾದ್ರೂ ಕರುಣೆ ತೋರು.
ಅಂದು ಬುಧವಾರ… ಕಾಲೇಜಿನ ಮೊದಲ ದಿನ.. ಆಗತಾನೇ ಪಿಯು ಮುಗಿಸಿ ಡಿಗ್ರಿಗೆ ಕಾಲಿಟ್ಟ ದಿನ. ಫಸ್ಟ್ ಡೇ ಹೇಗಿರುತ್ತೋ ಏನೋ ಅನ್ನೋ ಆತಂಕದ ಜೊತೆಗೇ ಹೊಸ ಪರಿಸರಕ್ಕೆ ದಾಪುಗಾಲಿಟ್ಟೆನೆಂಬ ಖುಷಿ. ಹಾಗಂತ, ನಾನೇನು ಸೈಲೆಂಟ್ ಹುಡ್ಗಿ ಅಲ್ಲ. ರ್ಯಾಗಿಂಗ್‌ಗೆಲ್ಲಾ ಭಯ ಬೀಳ್ಳೋ ಜಾಯಮಾನ ನಂದಲ್ಲ. ಆದ್ರೆ ಹೊಸ ಜಾಗ, ಹೊಸ ಫ್ರೆಂಡ್ಸ್, ಹೊಂದಿಕೊಳ್ಳೋದು ಹೇಗೆ ಅನ್ನೋ ಕಳವಳವಿತ್ತು. ಅಂದು ನನಗೆ ಮೊದಲು ಪರಿಚಯವಾಗಿದ್ದು ಕಾಲೇಜಿನ ಹಳೇ ತಲೆಗಳು, ಅಂದ್ರೆ ಸಿನಿಯರ್! ಅವರು ತುಂಬಾ ಜಾಣತನದಿಂದ ನನಗೆ ಮತ್ತು ಗೆಳತಿಗೆ ಸರಿಯಾಗಿ ಬಕ್ರಾ ಮಾಡಿದರು. ಅವತ್ತೇ, ತೀರಾ ಆಕಸ್ಮಿಕವಾಗಿ “ಅವನ’ ಪರಿಚಯವಾಯ್ತು. ಆ ಪರಿಚಯವೇ ನನ್ನ ಬದುಕಿಗೆ ದೊಡ್ಡ ಟ್ವಿಸ್ಟ್ ಕೊಟ್ಟಿದ್ದು. ಅದ್ ಯಾವ್ ಘಳಿಗೆಯಲ್ಲಿ ಅವನ ಪರಿಚಯವಾಯೊ¤à ಗೊತ್ತಿಲ್ಲ, ಆನಂತರದಲ್ಲಿ ನಾನು ಸಂಪೂರ್ಣವಾಗಿ ಕಳೆದು ಹೋಗಿಬಿಟ್ಟೆ.
ಸುಮ್ನೆ ಮುಖ ನೋಡಿಕೊಂಡು ಎಷ್ಟು ದಿನ ಕಾಲ ಕಳೆಯೋದು? ಆಗಿದ್ದಾಗ್ಲಿ, ನಾನೇ ಮುಂದಾಗಿ ಕೇಳಿಬಿಡೋಣ ಅಂದೊRಂಡೆ. ಕಡೆಗೂ ಅವನಿಗೆ ಪ್ರಪೋಸ್ ಮಾಡೋ ಟೈಂ ಬಂದೇ ಬಿಡು¤. ಹೇಗೋ ಹಾಯಾಗಿದ್ದ ಬದುಕಿನಲ್ಲಿ ಪ್ರೀತಿ ಅನ್ನೋ ಅಲೆ ಒಮ್ಮೆ ಜೋರಾಗಿ ಅಪ್ಪಳಿಸಿತು. ಮೊದಮೊದಲು ಎಲ್ಲವೂ ಚೆನ್ನಾಗಿತ್ತು. ನನಗೆ ಅವನೇ ಪ್ರಪಂಚ, ಅವನಿಗೆ ನಾನೇ ಎಲ್ಲಾ ಆಗಿದ್ದೆ. ನಮ್ಮಿಬ್ಬರನ್ನು ದೂರ ಮಾಡೋಕೆ ಯಾರಿಂದಲೂ ಆಗಲ್ಲ ಅನ್ನುವಷ್ಟರ ಮಟ್ಟಿಗೆ ಒಬ್ಬರಲ್ಲೊಬ್ಬರು ಬೆರೆತು ಹೋಗಿದ್ವಿ. ಆದ್ರೆ, ಎಲ್ಲಾ ಒಂದು ಹಂತದವರೆಗೆ ಮಾತ್ರ. ಆನಂತರದಲ್ಲಿ ಯಾಕೋ ಅವನ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣೋಕೆ ಶುರುವಾಯ್ತು.. ಅಲ್ಲಿಂದ ದಿನಾ ಜಗಳವೇ! ಸಾಲದ್ದಕ್ಕೆ, ನಮ್ಮಿಬ್ಬರ ನಡುವೆ ಇನ್ಯಾರೋ ಎಂಟ್ರಿ ಕೊಟ್ಟಿದ್ದು ಇನ್ನೂ ದೊಡ್ಡ ಶಾಕ್. ಆ ಕ್ಷಣ ನನ್ನ ಹೃದಯವೇ ಛಿದ್ರವಾಗಿತ್ತು. ನಾನಿದ್ದೂ ಬೇರೆಯವರ ಸಾಂಗತ್ಯವನ್ನು ನನ್ನ ಗೆಳೆಯ ಬಯಸಿದ್ದಾದರೂ ಹೇಗೆ? ಅವನು ನಿಜವಾಗಿಯೂ ನನ್ನನ್ನು ಪ್ರೀತಿ ಮಾಡ್ತಿದ್ದಾನಾ ಇಲ್ವಾ? ಅನ್ನೋ ಅನುಮಾನ ನನ್ನನ್ನು ಕಾಡತೊಡಗಿತು. ಅಂತೂ ಆ ಎಲ್ಲಾ ಗೊಂದಲಕ್ಕೆ ಐದಾರು ತಿಂಗಳ ನಂತರ ಕಡೆಗೂ ತೆರೆ ಬಿತ್ತು. ಆ ಮೂರನೆ ವ್ಯಕ್ತಿ ನಮ್ಮಿಂದ ದೂರಾಗಿದ್ದೂ ಆಯ್ತು.
ಇಷ್ಟೆಲ್ಲಾ ಆದ ನಂತರವಾದ್ರೂ ನಾನು ಅವನು ಚೆನ್ನಾಗಿರಿ¤àವಿ ಅಂದುಕೊಂಡಿದ್ದೆ. ಆದ್ರೆ, ಒಮ್ಮೆ ಒಡೆದು ಹೋದ ಮನಸುಗಳು ಮತ್ತೆ ಮೊದಲಿನಂತೆ ಪ್ರೀತಿಸುವುದು ಎಂದಾದರೂ ಸಾಧ್ಯವಾ? ಮತ್ತದೇ ಜಗಳ, ಹುಸಿ ಮುನಿಸು. ಕೋಪ, ನೋವು ಕಣ್ಣೀರು.. ನಾನು ತೋರಿದ ಪ್ರೀತಿಗೆ ಪ್ರತಿಯಾಗಿ ಒಂದು ದಿನವೂ ನನಗೆ ಪ್ರೀತಿ ಸಿಗಲಿಲ್ಲ.
ಹೇ ಹುಡ್ಗಾ, ನಿನಗೆ ನನಗಿಂತ ಫ್ರೆಂಡ್ಸ್, ಆಟ ಮೋಜು ಮಸ್ತಿ ಇದೇ ಮುಖ್ಯವಾಯ್ತಾ? ಯಾಕ್ ಈ ರೀತಿ ನನಗೆ ನೋವಿನ ಮೇಲೆ ನೋವು ಕೊಡ್ತಾ ಇದೀಯಾ? ನಿನ್ನನ್ನ ಅತಿಯಾಗಿ ಪ್ರೀತಿಸಿದ್ದೇ ತಪ್ಪಾಯ್ತಾ? ಒಮ್ಮೆ ಯೋಚಿಸಿ ನೋಡೋ, ನೀನೇ ನನ್ನ ಪ್ರಪಂಚ ಅಂದುಕೊಂಡಿರೋ ನನ್ನ ಮೇಲೆ ಸ್ವಲ್ಪವಾದ್ರೂ ಕರುಣೆ ತೋರು. ಚೂರು ಅರ್ಥ ಮಾಡ್ಕೊà ನನ್ನನ್ನ. ನೀನೆಷ್ಟೇ ನೋವು ಕೊಟ್ರೂ ಮತ್ತೆ ನಾನು ಎಲ್ಲ ಮರೆತು ನಿನ್ನ ಜೊತೆ ಮಾತನಾಡೋದು ನಿನ್ನ ಮೇಲಿನ ಅತಿಯಾದ ಪ್ರೀತಿಯಿಂದ. ದಿನದ 24 ಗಂಟೆಯಲ್ಲಿ ನನಗಾಗಿ ಕನಿಷ್ಠ 1 ಗಂಟೆಯಾದ್ರೂ ಮೀಸಲಿಡು. ಇಷ್ಟೇ ನನ್ನ ವಿನಂತಿ.
ಇಂತಿ ಪ್ರೀತಿಯ
ನೀನೇ ಕರೆದಂತೆ ಜಾನು..
ಸುನೀತ ರಾಥೋಡ್ ಬಿ.ಎಚ್ ದಾವಣಗೆರೆ