Advertisement
ನೂತನ ತಂಡವಾದರೂ ಗುಜ ರಾತ್ ಟೈಟಾನ್ಸ್ ತಾನಾಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನೊಂದೆಡೆ ಪಂಜಾಬ್ 3 ಪಂದ್ಯಗಳಲ್ಲಿ ಎರಡನ್ನು ಗೆದ್ದು ಭರವಸೆ ಮೂಡಿಸಿದೆ. ಪಂಜಾಬ್‌ನ ದುಬಾರಿ ಬ್ಯಾಟರ್-ಆಲ್‌ರೌಂಡರ್ ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಗುಜರಾತ್‌ನ ಕಿವೀಸ್ ಸ್ಪೀಡ್‌ಸ್ಟರ್ ಲಾಕಿ ಫರ್ಗ್ಯುಸನ್ ನಡುವಿನ ಮುಖಾಮುಖೀ ಈ ಪಂದ್ಯದ ಆಕರ್ಷಣೆ ಆಗಿರುವ ಸಾಧ್ಯತೆ ಇದೆ. ಪಂದ್ಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆಯುವ ಕಾರಣ ರನ್ ಪ್ರವಾಹ ಹರಿದು ಬಂದರೆ ಅಚ್ಚರಿಯೇನಿಲ್ಲ.
Related Articles
Advertisement
ಪಂಜಾಬ್ ಬೌಲಿಂಗ್ ಕಾಗಿಸೊ ರಬಾಡ, ರಾಹುಲ್ ಚಹರ್, ಲಿವಿಂಗ್‌ಸ್ಟೋನ್, ಆರ್ಷದೀಪ್, ವೈಭವ್ ಅರೋರಾ ಅವರನ್ನು ನೆಚ್ಚಿಕೊಂಡಿದೆ. ಇವರೆಲ್ಲರೂ ಚೆನ್ನೈ ವಿರುದ್ಧ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗುಜರಾತ್ ಸವಾಲು ಹೆಚ್ಚು ಕಠಿನ. ಬ್ರೆಬೋರ್ನ್ನಲ್ಲೂ ಬೌಲಿಂಗ್ ಕ್ಲಿಕ್ ಆಗಲಿದೆ ಎಂದು ಹೇಳಲು ಧೈರ್ಯ ಸಾಲದು.
ಗುಜರಾತ್ ಬೌಲಿಂಗ್ ಬಲಿಷ್ಠ :
ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಪಾಲಿಗೆ ಪ್ರತಿಯೊಂದೂ ಪ್ರತಿಷ್ಠೆಯ ಪಂದ್ಯವಾಗಿದೆ. ಇಲ್ಲಿ ಯಶಸ್ಸು ಸಾಧಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳುವುದು ಅವರ ಉದ್ದೇಶ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಜತೆಗೆ ಅವರ ನಾಯಕತ್ವವೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಮತ್ತೂಂದು ನೂತನ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಗುಜರಾತ್ ತನ್ನ ಅಭಿಯಾನ ಆರಂಭಿಸಿತ್ತು. ಇಲ್ಲಿ ಚೇಸಿಂಗ್‌ಗೆ ಲಭಿಸಿದ್ದು 159 ರನ್ ಮಾತ್ರ. ಬಲಿಷ್ಠ ಡೆಲ್ಲಿ ವಿರುದ್ಧ 171 ರನ್ ಪೇರಿಸಿ ಇದನ್ನು 14 ರನ್ನುಗಳಿಂದ ರೋಚಕವಾಗಿ ಗೆದ್ದು ಬಂದಿತು. ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್ ಅವರನ್ನು ಫರ್ಗ್ಯುಸನ್-ಪಾಂಡ್ಯ ಜೋಡಿ ಅಗ್ಗಕ್ಕೆ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿತ್ತು. ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಬೌಲಿಂಗ್ ಸಾಮರ್ಥ್ಯ ಏನೆಂಬುದು ತಿಳಿದಿದೆ. ವರುಣ್ ಆರೋನ್, ವಿಜಯ್ ಶಂಕರ್ ಬೌಲಿಂಗ್ ಸರದಿಯ ಮತ್ತಿಬ್ಬರು.