Advertisement

ProKabaddi: 9ನೇ ಜಯ ಸಾಧಿಸಿದ ಯುಪಿ ಪ್ಲೇಆಫ್ ನತ್ತ

10:10 PM Dec 07, 2024 | Team Udayavani |

ಪುಣೆ: ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧಾಸ್‌ 36-33 ಅಂತರದಿಂದ ಪುಣೇರಿ ಪಲ್ಟಾನ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಯೋಧಾಸ್‌ ಗೆಲುವಿನ ಸಂಖ್ಯೆ 9ಕ್ಕೆ ಏರಿದೆ.

Advertisement

ಒಟ್ಟು 17 ಪಂದ್ಯಗಳನ್ನು ಆಡಿರುವ ಅದು 6 ಪಂದ್ಯಗಳನ್ನು ಸೋತು, 2 ಪಂದ್ಯ ಡ್ರಾ ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಯುಪಿ ಪ್ಲೇಆಫ್ಗೇರುವುದು ಖಚಿತವಾಗಿದೆ.

ಮಿಂಚಿನ ಪ್ರದರ್ಶನ ನೀಡಿದ ರೈಡರ್‌ ಗಗನ್‌ ಗೌಡ ಯೋಧಾಸ್‌ ಗೆಲುವಿನ ಹೀರೋ ಎನಿಸಿದರು (15 ಅಂಕ). ಭವಾನಿ ರಜಪೂತ್‌ ದಾಳಿಯಲ್ಲಿ 6 ಅಂಕ ಪಡೆದರು.

ರಕ್ಷಣೆಯಲ್ಲಿ ನೆರವಿಗೆ ನಿಂತಿದ್ದು ಸುಮಿತ್‌. ಇವರು 3 ಯತ್ನದಲ್ಲಿ ಯಶ ಕಂಡರು. ಪುಣೇರಿ ಪರ ಪಂಕಜ್‌ ಮೋಹಿತೆ 11 ಅಂಕ ಗಳಿಸಿದರು. ಇದು ಪುಣೇರಿಗೆ ಎದುರಾದ 7ನೇ ಸೋಲು. ಸಾಂ ಕವಾಗಿ ನೋಡಿದರೆ ಪುಣೇರಿ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಲಿಲ್ಲ.

ಟೈಟಾನ್ಸ್‌ ಗೆಲುವು: ತೆಲುಗು ಟೈಟಾನ್ಸ್‌ ಮತ್ತು ಬೆಂಗಾಲ್‌ ವಾರಿಯರ್ ನಡುವಿನ ದ್ವಿತೀಯ ಪಂದ್ಯ ಕೂಡ ಅತ್ಯಂತ ರೋಚಕವಾಗಿ ಸಾಗಿತು. ಇದನ್ನು ಟೈಟಾನ್ಸ್‌ 34-32 ಅಂಕಗಳಿಂದ ಜಯಿಸಿತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next