ಪುಣೆ: ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪಾಟ್ನಾ ಪೈರೇಟ್ಸ್-ಗುಜರಾತ್ ಜೈಂಟ್ಸ್ ನಡುವಿನ ಶನಿವಾರದ ಪ್ರೊ ಕಬಡ್ಡಿ ಪಂದ್ಯ 40-40 ಅಂಕಗಳಿಂದ ಟೈ ಆಗಿದೆ. ಇದರೊಂದಿಗೆ ಪಾಟ್ನಾ 77 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಗುಜರಾತ್ 11ನೇ ಸ್ಥಾನದಲ್ಲಿದ್ದು, ಈಗಾಗಲೇ ನಿರ್ಗಮಿಸಿದೆ. ಪಾಟ್ನಾ ಪರ ರೈಡರ್ಗಳಾದ ದೇವಾಂಕ್ 10, ಸುಧಾಕರ್ ಎಂ. 7 ಅಂಕ ಗಳಿಸಿದರು.
ದಬಾಂಗ್ ಡೆಲ್ಲಿ ಜಯ:
ದ್ವಿತೀಯ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 33-31 ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿತು. ಇದು 21 ಪಂದ್ಯಗಳಲ್ಲಿ ಡೆಲ್ಲಿಗೆ ಒಲಿದ 12ನೇ ಜಯ. ಈ ಜಯದೊಂದಿಗೆ ಡೆಲ್ಲಿ 76 ಅಂಕಗಳೊಂದಿಗೆ 3ನೇ ಸ್ಥಾನಿಯಾಯಿತು. ಜೈಪುರ್ 22 ಪಂದ್ಯಗಳಲ್ಲಿ 8ನೇ ಸೋಲನುಭವಿಸಿತು.