Advertisement
ನೀರಜ್ ನೇತೃತ್ವದಲ್ಲೇ ಕಾರ್ಯಾಚರಣೆ ನಡೆ ಸಿದ್ದ ವಿಶೇಷ ತಂಡವೊಂದು, 2013ರಲ್ಲಿ ಎಸ್. ಶ್ರೀಶಾಂತ್, ಚಂಡೀಲಾ, ಅಂಕಿತ್ ಚವಾಣ್‌ರನ್ನು ಬಂಧಿಸಿತ್ತು. ಇದೀಗ ಅಷ್ಟೂ ಜನ ಬಿಸಿಸಿಐ ನಿಷೇಧದಿಂದ ಪಾರಾಗಿದ್ದಾರೆ. ಶ್ರೀಶಾಂತ್ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದರೂ, ಅವರ ವಿರುದ್ಧದ ಆಜೀವ ನಿಷೇಧವನ್ನು 7 ವರ್ಷಕ್ಕಿಳಿಸಲು 2019ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಪರಿಣಾಮ, ಶ್ರೀಶಾಂತ್ 2020ರಲ್ಲೇ ನಿಷೇಧದಿಂದ ಹೊರಬಂದಿದ್ದರು. ಅನಂತರ ಕೇರಳ ಪರ ರಣಜಿ ಆಡಿ ನಿವೃತ್ತಿ ಹೇಳಿದ್ದರು.
ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಯಲು ನಮ್ಮ ದೇಶದಲ್ಲಿ ಸೂಕ್ತ ಕಾನೂನುಗಳಿಲ್ಲ. ಹೀಗಾಗಿ ಅಂತಹ ಪ್ರಕರಣಗಳು ನಿಲ್ಲುವುದಿಲ್ಲ. ಜಿಂಬಾಬ್ವೆಯಂತಹ ದೇಶದಲ್ಲೂ ಭ್ರಷ್ಟಾಚಾರ ತಡೆಯಲು ಬಲವಾದ ನಿಯಮಗಳಿವೆ. ಯೂರೋಪ್ ರಾಷ್ಟ್ರಗಳಲ್ಲೂ ನಿಯಮಗಳಿವೆ. ಕಾರಣ ಅಲ್ಲಿನ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಫುಟ್‌ಬಾಲ್, ಟೆನಿಸ್‌ನಲ್ಲೂ ಭ್ರಷ್ಟಾಚಾ ರವಿದೆ ಎಂದು ನೀರಜ್ ಹೇಳಿದರು. 37 ವರ್ಷ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ನೀರಜ್, 2000ರಲ್ಲಿ ನಡೆದ ಹ್ಯಾನ್ಸಿ ಕ್ರೋನ್ಯೆ ಫಿಕ್ಸಿಂಗ್ ಪ್ರಕರಣದಲ್ಲೂ ಕಾರ್ಯ ನಿರ್ವಹಿಸಿದ್ದರು.