Advertisement

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

08:52 PM Dec 22, 2024 | Team Udayavani |

ಅಮರಾವತಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕಿರುಕುಳ ಮತ್ತು ದೌರ್ಜನ್ಯಗಳು ತಿಳಿವಳಿಕೆಯ ಕೊರತೆಯಿಂದ ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ರವಿವಾರ(ಡಿ22) ಹೇಳಿಕೆ ನೀಡಿದ್ದಾರೆ

Advertisement

ಮಹಾರಾಷ್ಟ್ರದ ಅಮರಾವತಿಯಲ್ಲಿ ಮಹಾನುಭಾವ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಭಾಗವತ್,’ಧರ್ಮವು ಮುಖ್ಯವಾಗಿದ್ದು ಅದನ್ನು ಸರಿಯಾಗಿ ಕಲಿಸಬೇಕು” ಎಂದರು.

”ಧರ್ಮವು ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ ಮತ್ತು ಎಲ್ಲವೂ ಅದರ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಅದನ್ನು ಸನಾತನ ಎಂದು ಕರೆಯಲಾಗುತ್ತದೆ. ಧರ್ಮದ ನಡವಳಿಕೆಯು ಧರ್ಮದ ರಕ್ಷಣೆ” ಎಂದು ಭಾಗವತ್ ಹೇಳಿದರು.

”ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ರಾಮ ಮಂದಿರದಂತಹ , ಮಂದಿರ-ಮಸೀದಿ ವಿವಾದಗಳನ್ನು ಕೆದಕುವುದು ಸರಿಯಲ್ಲ. ಇಂತಹ ವಿಚಾರಗಳಿಂದ ಹಿಂದೂ ಮುಖಂಡರಾಗಬಹುದು ಅಂದುಕೊಳ್ಳುವುದು ತಪ್ಪು” ಎಂದು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next