Advertisement

Narrow Escape; ಯುಎಸ್ ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನಗಳ ದುರಂತ

08:51 AM Jan 01, 2025 | Team Udayavani |

ನ್ಯೂಯಾರ್ಕ್: ದಕ್ಷಿಣ ಕೊರಿಯಾದಲ್ಲಿ ಘೋರ ವಿಮಾನ ಅವಘಡ ಸಂಭವಿಸಿದ ಕೆಲವೇ ದಿನಗಳಲ್ಲಿ, ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೊಂದು ಭಾರೀ ಅವಘಡ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಜನರನ್ನು ಆಘಾತಕ್ಕೆ ಒಳಪಡಿಸಿದೆ.

Advertisement

ಕಳೆದ ಶುಕ್ರವಾರ ಮಧ್ಯಾಹ್ನ ಗೊನ್ಜಾಗಾ ವಿಶ್ವವಿದ್ಯಾಲಯದ ಬಾಸ್ಕೆಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಡೆಲ್ಟಾ ಏರ್‌ಲೈನ್ಸ್ ವಿಮಾನವು ಢಿಕ್ಕಿ ಹೊಡೆಯುವಂತಾಗಿದ್ದ ಉದ್ವಿಗ್ನ ಕ್ಷಣದ ದೃಶ್ಯಾವಳಿಗಳು ಸೆರೆಹಿಡಿಯಲಾಗಿದೆ.

ಸ್ಥಳೀಯ ಕಾಲಮಾನ ಸಂಜೆ 4:30 ರ ಸುಮಾರಿಗೆ, ಗೊನ್ಜಾಗಾದ ಚಾರ್ಟರ್ಡ್ ಕೀ ಲೈಮ್ ಏರ್ ಫ್ಲೈಟ್ 563 ರನ್‌ವೇಗೆ ಅಡ್ಡಲಾಗಿ ಹಾರಾಟ ನಡೆಸುತ್ತಿದ್ದಾಗ, ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ತುರ್ತಾಗಿ “ಸ್ಟಾಪ್ ..ಸ್ಟಾಪ್…ಸ್ಟಾಪ್ !” ಎಂದಿರುವುದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಕಾಣಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next