Advertisement
2024ರ ಮೇ 24ರಂದು ಎಚ್.ಡಿ.ಕೋಟೆ ರಸ್ತೆಯ ಕೋಟೆ ಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋ ರಿಕ್ಷಾ ಹಾಗೂಗೂಡ್ಸ್ ವಾಹನದ ನಡುವೆ ಸಣ್ಣ ಪ್ರಮಾಣದ ಅಪಘಾತ ವಾಗಿತ್ತು. ಚಾಲಕರಿಬ್ಬರ ನಡುವೆ ಜಗಳ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಅಷ್ಟರಲ್ಲಿ ಆಟೋ ಚಾಲಕ ಯೋಗೇಶ್, ಗೂಡ್ಸ್ ವಾಹನದಲ್ಲಿದ್ದ ಟಿ. ಮಂಜುನಾಥ ಮತ್ತು ಆರ್. ಮಂಜುನಾಥ ಅವರ ಮೇಲೆ ತನ್ನ ಬಳಿ ಇದ್ದ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿ ಕೊಲೆ ಮಾಡಿದ್ದ. ಜಯಪುರ ಠಾಣೆ ನಿರೀಕ್ಷಕ ಕೆ. ಜೀವನ್ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.