Advertisement

Karnataka; ಶೀಘ್ರದಲ್ಲಿ ಟಾಟಾದಿಂದ ಕೋಲಾರದಲ್ಲಿ ಐಫೋನ್‌ ಉತ್ಪಾದನೆ?

10:28 AM Jul 12, 2023 | Team Udayavani |

ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ ದೈತ್ಯ ಉದ್ಯಮ ಸಂಸ್ಥೆ ಟಾಟಾ ಗ್ರೂಪ್‌ ದೇಶದಲ್ಲೇ ಐಫೋನ್‌ 15ರ ಉತ್ಪಾದನೆ ಆರಂಭಿಸಲಿದೆ!

Advertisement

ಕರ್ನಾಟಕದ ಕೋಲಾರದ ನರಸಾಪುರದಲ್ಲಿರುವ ಆ್ಯಪಲ್‌ನ ಪೂರೈಕೆದಾರ ಸಂಸ್ಥೆ ವಿಸ್ಟ್ರಾನ್‌ ಘಟಕವನ್ನು ಆಗಸ್ಟ್‌ನಲ್ಲಿ ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್‌ ನಿರ್ಧರಿಸಿದ್ದು, ಈ ಕುರಿತ ಒಪ್ಪಂದಕ್ಕೆ ಸಹಿ ಬೀಳುವುದಷ್ಟೇ ಬಾಕಿಯಿದೆ. ವಿಸ್ಟ್ರಾನ್‌ ಘಟಕದಲ್ಲಿ ಸದ್ಯ ಐಫೋನ್‌ 14 ಮಾಡೆಲ್‌ನ ಜೋಡಣೆ ನಡೆಯುತ್ತಿದೆ. ಒಂದು ವೇಳೆ ಈ ಘಟಕವನ್ನು ಟಾಟಾ ತನ್ನ ತೆಕ್ಕೆಗೆ ಪಡೆದರೆ ಐಫೋನ್‌ ಜೋಡಣೆಯಲ್ಲಿ ತೊಡಗಿಸಿಕೊಳ್ಳುವ ಭಾರತದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಕುರಿತು ಟಾಟಾ ಆಗಲಿ, ವಿಸ್ಟ್ರಾನ್‌ ಹಾಗೂ ಆ್ಯಪಲ್‌ ಕಂಪೆನಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ಮೂಲದ ಪ್ರಕಾರ ಟಾಟಾ ಕಂಪೆನಿಯು ಈಗಾಗಲೇ ತಮಿಳುನಾಡಿನಲ್ಲಿರುವ ತನ್ನ ಫ್ಯಾಕ್ಟರಿಯಲ್ಲಿ ಐಫೋನ್‌ ಚೇಸಿಸ್‌ ಉತ್ಪಾದನೆ ಮಾಡುತ್ತಿದೆ.

ಅಮೆರಿಕದ ಕ್ಯುಪರ್ಟಿನೋ ಮೂಲದ ಟೆಕ್‌ ಕಂಪೆನಿಯಾಗಿರುವ ವಿಸ್ಟ್ರಾನ್‌, ತೈವಾನ್‌ನ ಇತರ ಎರಡು ಕಂಪೆನಿಗಳ ಸಹಭಾಗಿತ್ವದಲ್ಲಿ ಐಫೋನ್‌ 12, 13 ಮತ್ತು 14ರ ಮಾಡೆಲ್‌ಗಳನ್ನು ತಯಾರಿಸಿ, ರಫ್ತು ಮಾಡುತ್ತಿತ್ತು. ಈಗ ವಿಸ್ಟ್ರಾನ್‌ ಅನ್ನು ಟಾಟಾ ಸ್ವಾಧೀನಪಡಿಸಿಕೊಂಡರೆ ಐಫೋನ್‌ 15ರ ಜೋಡಣೆ ಭಾರತದಲ್ಲೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next