Advertisement

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

08:48 PM Jan 07, 2025 | Team Udayavani |

ನವದೆಹಲಿ: ಮದುವೆಯ ವೆಚ್ಚ ಮತ್ತು ವರದಕ್ಷಿಣೆಯನ್ನು ತಪ್ಪಿಸುವುದಕ್ಕಾಗಿ 6 ಮಂದಿ ಸೋದರರು, ಮತ್ತೊಂದು ಕುಟುಂಬದ 6 ಮಂದಿ ಸೋದರಿಯರನ್ನು ಮದುವೆಯಾದ ವಿಶಿಷ್ಟ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇದಕ್ಕಾಗಿ ಅತ್ಯಂತ ಕಿರಿಯ ಸಹೋದರನಿಗೆ 18 ವರ್ಷ ವಯಸ್ಸಾಗುವವರೆಗೆ ಉಳಿದವರೆಲ್ಲರೂ ಕಾದು ಮದುವೆಯಾಗಿದ್ದಾರೆ ಎಂದು ಪಾಕಿಸ್ತಾನದ “ದ ಕಾಮಾ ಪ್ರಸ್‌’ ಪತ್ರಿಕೆ ವರದಿ ಮಾಡಿದೆ.

Advertisement

ಈ ಬಗ್ಗೆ ಕಿರಿಯ ಸೋದರ ಮಾಹಿತಿ ನೀಡಿದ್ದು, ನಾವು ಕಡಿಮೆ ಖರ್ಚಿನಲ್ಲಿ ಮದುವೆಯಾಗಬೇಕು ಎಂದು ಬಯಸಿದ್ದೆವು. ಹೀಗಾಗಿ ನಾನು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅಣ್ಣಂದಿರೆಲ್ಲಾ ಕಾದಿದ್ದರು ಎಂದು ಹೇಳಿದ್ದಾನೆ ಎಂದು ವರದಿ ತಿಳಿಸಿದೆ.

ಈ ಮದುವೆಯಲ್ಲಿ 100 ಮಂದಿ ಅತಿಥಿಗಳಷ್ಟೇ ಭಾಗಿಯಾಗಿದ್ದು, ಕೇವಲ 1 ಲಕ್ಷ ಪಾಕ್‌ ರೂ.ಗಳಷ್ಟೇ(ಭಾರತದ 30,000 ರೂ.) ಖರ್ಚಾ ಗಿದೆ ಎಂದೂ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next