Advertisement

Box Office:‌ ಸಾಲು ಸಾಲು ಸಿನಿಮಾದಿಂದ ಭರ್ತಿಯಾದ ಥಿಯೇಟರ್‌; 4 ದಿನದಲ್ಲಿ 400 ಕೋಟಿ ಗಳಿಕೆ

12:34 PM Aug 14, 2023 | Team Udayavani |

ಮುಂಬಯಿ: ಸಾಲು ಸಾಲು ಚಿತ್ರಗಳ ಯಶಸ್ವಿ ಪ್ರದರ್ಶನದಿಂದ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಕಲೆಕ್ಷನ್‌ ಆಗಿದೆ. ಕಳೆದ ವಾರ ಹಾಗೂ ಈ ಹಿಂದಿನ ಕೆಲ ವಾರಗಳಲ್ಲಿ ತೆರೆಕಂಡ ಸಿನಿಮಾಗಳು ಭಾರತೀಯ ಬಾಕ್ಸ್‌ ಆಫೀಸ್‌ ನಲ್ಲಿ ಕಲೆಕ್ಷನ್‌ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

Advertisement

ಜೈಲರ್‌ : ಇಂಡಿಯನ್‌ ಬಾಕ್ಸ್‌ ಆಫೀಸ್ ನಲ್ಲಿ ʼಜೈಲರ್‌ʼ ದೊಡ್ಡ‌ ಹಿಟ್ ಆಗುವತ್ತ ಸಾಗುತ್ತಿದೆ. ಸಿನಿಮಾ ರಿಲೀಸ್‌ ಆದ ಮೊದಲ ವೀಕೆಂಡ್‌ ವರೆಗೆ ಭಾರತದಲ್ಲಿ 162 ಕೋಟಿ ರೂಪಾಯಿಯನ್ನು ಗಳಸಿದೆ. 4 ದಿನದಲ್ಲಿ‌ 93 ಲಕ್ಷ ಟಿಕೆಟ್‌ ಗಳು ಸೇಲ್‌ ಆಗಿದೆ.

ʼಗದರ್‌ – 2ʼ: ಕಾಲಿವುಡ್‌ ನ ಬಿಗೆಸ್ಟ್‌ ಸಿನಿಮಾ ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾಕ್ಕೆ ಸನ್ನಿ ಡಿಯೋಲ್‌ ಅವರ ʼಗದರ್‌ -2ʼ ಬಾಕ್ಸ್‌ ಆಫೀಸ್‌ ನಲ್ಲಿ ಟಕ್ಕರ್‌ ಕೊಟ್ಟಿದೆ. ಅನಿಲ್‌ ಶರ್ಮಾ ಅವರ ನಿರ್ದೇಶನದ ಸಿನಿಮಾ ಮೊದಲ ಮೂರು ದಿನದಲ್ಲಿ 152 ಕೋಟಿ ರೂಪಾಯಿಯನ್ನು ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಗಳಿಸಿದೆ. ವಾರಾಂತ್ಯದಲ್ಲಿ ಒಂದು ಅಂದಾಜಿನ ಪ್ರಕಾರ ʼಗದರ್‌ -2ʼ ಸಿನಿಮಾದ 70 ಲಕ್ಷ ಟಿಕೆಟ್‌ ಗಳು ಮಾರಾಟವಾಗಿದೆ ಎನ್ನಲಾಗಿದೆ. ಈ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಿನಿಮಾದ‌ ಟಿಕೆಟ್ ಮತ್ತಷ್ಟು ಮಾರಾಟವಾಗುವುದರ ಜೊತೆ ಸಿನಿಮಾ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಜೈಲರ್‌ʼ‌ ನ್ನು ಮೀರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ʼಓ ಮೈ ಗಾಡ್‌ -2ʼ: ಅಕ್ಷಯ್ ಕುಮಾರ್, ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಮುಖ್ಯಭೂಮಿಕೆಯ ʼಓ ಮೈ ಗಾಡ್‌ -2ʼ ಸಿನಿಮಾದ 20 ಲಕ್ಷ ಟಿಕೆಟ್‌ ವೀಕೆಂಡ್‌ ನಲ್ಲಿ ಸೇಲ್‌ ಆಗಿದೆ. ಇದುವರೆಗೆ ಸಿನಿಮಾ 47 ಕೋಟಿ ರೂಪಾಯಿಯನ್ನು ಗಳಿಸಿದೆ.

ಭೋಲಾ ಶಂಕರ್:  ಚಿರಂಜೀವಿ ಅವರ ಬಹು ನಿರೀಕ್ಷಿತ ʼಭೋಲಾ ಶಂಕರ್‌ʼ ಸಿನಿಮಾಕ್ಕೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತವಾಗದೆ ಇದ್ದರೂ, ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 22 ಕೋಟಿ ರೂಪಾಯಿಯನ್ನು ಗಳಿಸಿದೆ. ಮೊದಲ ವಾರಾಂತ್ಯದಲ್ಲಿ ಸಿನಿಮಾದ 16 ಲಕ್ಷ ಟಿಕೆಟ್‌ ಗಳು ಮಾರಾಟವಾಗಿದೆ.

Advertisement

ಇನ್ನು ಇತ್ತೀಚೆಗೆ ರಿಲೀಸ್‌ ಆಗಿರುವ ಕರಣ್‌ ಜೋಹರ್‌ ಅವರ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದ ಬಾಕ್ಸ್‌ ಆಫೀಸ್‌ ಸವಾರಿ ಮುಂದುವರೆದಿದೆ. ಸಿನಿಮಾ ಮೂರನೇ ವಾರದಲ್ಲಿ 10.20 ಕೋಟಿ ರೂಪಾಯಿಯನ್ನು ಗಳಿಸಿದೆ. ಮೂರನೇ ವಾರಾಂತ್ಯದಲ್ಲಿ 3.75 ಲಕ್ಷ ಟಿಕೆಟ್ ಗಳು ಮಾರಾಟವಾಗಿದೆ.

ಹಾಲಿವುಡ್‌ ನ ಕ್ರಿಸ್ಟೋಫರ್ ನೋಲನ್ ಅವರ ʼಓಪನ್‌ಹೈಮರ್‌ʼ  ʼಗದರ್‌ -2ʼ, ʼಜೈಲರ್‌ʼ, ʼಓಮೈಗಾಡ್-2‌ʼ ಚಿತ್ರದೊಂದಿಗೆ ಪೈಪೋಟಿ ನಡೆಸಿ 5.85 ಕೋಟಿ ರೂಪಾಯಿಯ ಗಳಿಕೆ ಮಾಡಿದೆ. ಈ ಸಿನಿಮಾದ 1 ಲಕ್ಷ ಟಿಕೆಟ್‌ ವೀಕೆಂಡ್‌ ನಲ್ಲಿ ಸೇಲ್‌ ಆಗಿದೆ.

ʼಬಾರ್ಬಿʼ, ʼಮಿಷನ್ ಇಂಪಾಸಿಬಲ್ 7ʼ, ʼಬ್ರೋʼ, ʼಮೆಗ್-2ʼ, ʼಬೇಬಿʼ ದೊಡ್ಡ ಚಿತ್ರಗಳ ಅಬ್ಬರದ ನಡುವೆಯೂ ಒಂದಷ್ಟು ಶೋಗಳನ್ನು ಉಳಿಸಿಕೊಂಡಿದೆ. ಈ ವಾರಾಂತ್ಯದಲ್ಲಿ 1 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು 5 ಕೋಟಿ ರೂಪಾಯಿಯ ಕಲೆಕ್ಷನ್‌ ಮಾಡಿದೆ.

4 ದಿನದಲ್ಲಿ 403 ಕೋಟಿ ಗಳಿಸಿದ ಇಂಡಿಯನ್‌ ಬಾಕ್ಸ್‌ ಆಫೀಸ್:‌

ಥಿಯೇಟರ್‌ ಗಳು ಮತ್ತೆ ಹೌಸ್‌ ಫುಲ್‌ ಪ್ರದರ್ಶನ ಕಾಣುತಿದೆ. ಕಳೆದ 4 ದಿನದಲ್ಲಿ 403 ಕೋಟಿ ರೂಪಾಯಿಯ ಕಲೆಕ್ಷನ್‌ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಆಗಿದೆ. 2.10 ಕೋಟಿ ಜನ ಥಿಯೇಟರ್‌ ನಾಲ್ಕು ದಿನದಲ್ಲಿ ಭೇಟಿ ನೀಡಿದ್ದಾರೆ.

ಇದು ಭಾರತೀಯ ಬಾಕ್ಸ್ ಆಫೀಸ್‌ ನಲ್ಲಾದ ಸಾರ್ವಕಾಲಿಕ ಅತ್ಯುತ್ತಮ ವಾರಾಂತ್ಯಗಳ ಕಲೆಕ್ಷನ್‌ ಗಳಲ್ಲಿ ಒಂದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next