Advertisement

ಸ್ಟ್ರಾಂಜಾ ಮೆಮೋರಿಯಲ್‌ ಬಾಕ್ಸಿಂಗ್‌: ಭಾರತಕ್ಕೆ  ಎರಡು ಚಿನ್ನದ ಪದಕ

05:00 AM Feb 20, 2019 | Team Udayavani |

ಸೋಫಿಯ (ಬಲ್ಗೇರಿಯ): ಭಾರತೀಯ ವನಿತಾ ಬಾಕ್ಸರ್‌ಗಳಾದ ನಿಖತ್‌ ಜರೀನ್‌ ಮತ್ತು ಮೀನಾ ಕುಮಾರಿ ದೇವಿ “ಸ್ಟ್ರಾಂಜಾ ಮೆಮೋರಿಯಲ್‌ ಬಾಕ್ಸಿಂಗ್‌’ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 

Advertisement

ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ನಿಖತ್‌ ಜರೀನ್‌ 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ  ಫಿಲಿಪೈನ್ಸ್‌ನ ಐರಿಶ್‌ ಮ್ಯಾಂಗೊ ವಿರುದ್ಧ  ಗೆಲುವು ದಾಖಲಿಸಿದರು.  54 ಕೆ.ಜಿ. ವಿಭಾಗದಲ್ಲಿ ಮೀನಾ ಕುಮಾರಿ ಕೂಡ ಫಿಲಿಪೈನ್ಸ್‌ನ ಐರಾ ವಿಲೆಗಾಸ್‌ ಅವರನ್ನು ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ರಕ್ಷಣಾತ್ಮಕವಾಗಿ ಆಡಿದ ಜರೀನ್‌ ಅವರು ಮ್ಯಾಂಗೊ ಅವರಿಗೆ ಅಂಕ ಗಳಿಸಲು ಅವಕಾಶವನ್ನೇ ನೀಡದೆ 5-0 ಅಂಕಗಳಿಂದ ಗೆದ್ದರು. ಕಳೆದ ವರ್ಷ ಕಂಚಿನ ಪದಕ ಜಯಿಸಿದ್ದ ಮೀನಾ ಕುಮಾರಿ ಈ ಬಾರಿ ತನ್ನ ಪ್ರದರ್ಶನವನ್ನು ಉತ್ತಮಗೊಳಿಸಿ 3-2 ಅಂತರದಿಂದ ವಿಲೆಗಾಸ್‌ ಅವರ ವಿರುದ್ಧ ಭಾರೀ ಹೋರಾಟ ನಡೆಸಿ ಗೆಲುವು ದಾಖಲಿಸಿದರು.

ಮಂಜು ರಾಣಿಗೆ ಬೆಳ್ಳಿ
48 ಕೆ.ಜಿ. ವಿಭಾಗದ ಫೈನಲ್‌ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಬಾಕ್ಸರ್‌ ಮಂಜು ರಾಣಿ ಫಿಲಿಪೈನ್ಸ್‌
ನ ಪ್ರತಿಸ್ಪರ್ಧಿ ಜೊಸೈ ಗುಬುಕೊ ಅವರ ವಿರುದ್ಧ 2-3 ಅಂಕಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಸೋಮವಾರದ ಸೆಮಿಫೈನಲ್‌ ಪಂದ್ಯಗಳಲ್ಲಿ ಪಿವಿಲೋ ಬಸುಮತರಿ (64 ಕೆ.ಜಿ.), ನೀರಜ್‌ (60 ಕೆ.ಜಿ.), ಲೌಲಿನಾ ಬೊರ್ಗಹೈನ್‌ (69 ಕೆ.ಜಿ.) ಸೋತು ಕಂಚಿನ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next