ನವದೆಹಲಿ: ಆನ್‌ಲೈನ್ ಗೇಮ್ PUBG ಮೂಲಕ ಪ್ರೇಮ ಆರಂಭವಾಗಿ 4 ಮಕ್ಕಳೊಂದಿಗೆ ಭಾರತಕ್ಕೆ ಬಂದು ಗ್ರೇಟರ್ ನೋಯ್ಡಾದ ನಿವಾಸಿ ಸಚಿನ್ ಮೀನಾ ಅವರೊಂದಿಗೆ ವಿವಾಹವಾಗಿದ್ದ ಸೀಮಾ ಈಗ ಗರ್ಭಿಣಿಯಾಗಿದ್ದು, ಸುದ್ದಿ, ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
ನೇಪಾಳದ ಮೂಲಕ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತವನ್ನು ಪ್ರವೇಶಿಸಿದ್ದ ಸೀಮಾ ಹೈದರ್ ಪ್ರೇಮಕಥೆಯು ಭಾರೀ ಸುದ್ದಿಯಾಗಿತ್ತು. ಈಗ ತನ್ನ ಗರ್ಭಧಾರಣೆ ಯಾಗಿರುವುದನ್ನು ಬಹಿರಂಗಪಡಿಸಿದ್ದು, ತನಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಇದೆ ಎಂದು ವಿಡಿಯೋ ಪ್ರಾರಂಭವಾಗಿದೆ. ಗರ್ಭಧಾರಣೆಯ ಪರೀಕ್ಷೆ ಮಾಡಿದ್ದು ಸಕಾರಾತ್ಮಕ ಫಲಿತಾಂಶದೊಂದಿಗೆ ಸುದ್ದಿಯನ್ನು ಖಚಿತಪಡಿಸಲಾಗಿದೆ.
ವೀಡಿಯೊದಲ್ಲಿ, ಸೀಮಾ ಸಚಿನ್‌ನನ್ನು ಕೋಣೆಗೆ ಕರೆದು ಆಶ್ಚರ್ಯಕರವಾಗಿ ತನ್ನ ಅಂಗೈಯನ್ನು ತೋರುವಂತೆ ಕೇಳಿದ್ದಾಳೆ. ಆತನ ಕೈಯಲ್ಲಿ ಗರ್ಭಧಾರಣೆ ಪರೀಕ್ಷೆಯ ಕಿಟ್ ಅನ್ನು ಇಟ್ಟು ಸಂತೋಷದಲ್ಲಿ ತೇಲುವಂತೆ ಮಾಡುತ್ತಾಳೆ. ಸ್ವಲ್ಪ ಸಮಯದ ನಂತರ, ಸಚಿನ್ ಅವಳನ್ನು ಬಿಗಿಯಾಗಿ ತಬ್ಬಿಕೊಂಡು, ಗರ್ಭ ಪರೀಕ್ಷಾ ಕಿಟ್ ಅನ್ನು ತನ್ನ ಎದೆಯ ಹತ್ತಿರ ಹಿಡಿದು ಕೊಳ್ಳುತ್ತಾನೆ.
ಸಚಿನ್ ಅವರು ಶೀಘ್ರದಲ್ಲೇ ಮತ್ತೆ ತಂದೆಯಾಗಲಿದ್ದಾರೆ ಎಂದು ಈಗಾಗಲೇ ಏಳು ತಿಂಗಳ ಗರ್ಭಿಣಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಸೀಮಾ ಹೈದರ್ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಸಚಿನ್ ಮೀನಾ ವಿವಾಹವಾಗಿದ್ದರು. ಭಾರತಕ್ಕೆ ಬಂದ ನಂತರ, ಅವರ ಎಂಟು ವರ್ಷದ ಮಗ ಫರ್ಹಾನ್ ಅಲಿಯನ್ನು ರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು. ಮೂವರು ಪುತ್ರಿಯರಾದ ಫರ್ವಾ (6), ಫರಿಹಾ ಬಟೂಲ್ (4), ಮತ್ತು ಫರ್ಹಾ ಅವರಿಗೆ ಕ್ರಮವಾಗಿ ಪ್ರಿಯಾಂಕಾ, ಮುನ್ನಿ ಮತ್ತು ಪರಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಸೀಮಾಳ ಮೊದಲ ಪತಿ ಗುಲಾಮ್ ಹೈದರ್ ಪಾಕಿಸ್ಥಾನದಲ್ಲಿದ್ದಾರೆ.