Advertisement
ಇಫಿ ಚಿತ್ರೋತ್ಸವದಲ್ಲಿ ಅವರ “ಬೋಸ್ನಿಯಾನ್ ಪಾಟ್ʼ ಚಿತ್ರ ಪ್ರದರ್ಶನಗೊಂಡಿದೆ. ಈ ಸಿನಿಮಾ ಕ್ರೋಷಿಯಾ ಮತ್ತು ಜರ್ಮನ್ ಭಾಷೆಯಲ್ಲಿ ರೂಪುಗೊಂಡಿದೆ.“ನನ್ನ ಸಿನಿಮಾಕ್ಕೆ ಒಳ್ಳೆಯ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಅದರ ಬಿಡುಗಡೆ ಕುರಿತೂ ಯೋಚಿಸುತ್ತಿರುವೆ. ಒಂದು ಒಳ್ಳೆಯ ಸಿನಿಮಾವನ್ನು ಸ್ವೀಕರಿಸುವಂಥ ಪ್ರೀತಿ ಭಾರತೀಯರಲ್ಲಿದೆ. ಕೇರಳದ ಸಿನಿಮೋತ್ಸವಗಳಲ್ಲಿ ಭಾಗವಹಿಸಿರುವೆʼ ಎಂದರು.
Related Articles
Advertisement
ಕಥಾ ನಾಯಕ ತನ್ನ ಸವಾಲುಗಳನ್ನು ಎದುರಿಸುತ್ತಲೇ ತನ್ನೊಳಗಿನ ಅವಲೋಕನದಲ್ಲೂ ತೊಡಗುತ್ತಾನೆ.
ಸಿನಿಮಾ ನಿರ್ಮಾಣದ ಬಗ್ಗೆ ಹೇಳುತ್ತಾ, ಇದು ನಿಜವಾಗಲೂ ಕಸರತ್ತಿನ ಪ್ರಯತ್ನ. ಕ್ರೋಷಿಯಾ, ಆಸ್ಟ್ರಿಯಾ ಸೇರಿದಂತೆ ಮೂರು ರಾಷ್ಟ್ರಗಳ ನಟರೊಂದಿಗೆ ಸಂಯುಕ್ತವಾಗಿ ಕೆಲಸ ಮಾಡುವುದು ಕೊಂಚ ಹೆಚ್ಚು ಶ್ರಮ ಬೇಡುವ ಕೆಲಸ ಎಂದು ಹೇಳಿದ ಪಾವೊ, ಸಿನಿಮಾದ ಶೀರ್ಷಿಕೆಯೂ ಒಂದು ಉಪಮೆ. ಅದೊಂದು ಎಲ್ಲರೂ ಸೇರಿ ಸಿದ್ಧಪಡಿಸುವ ಒಂದು ಅಡುಗೆ ಎಂದು ವಿವರಿಸಿದರು.
ಪಾವೋ ರಂಗಭೂಮಿಯಿಂದ ಬಂದವರು. ನಾಟಕಗಳನ್ನು ಬರೆಯುತ್ತಾ ಬೆಳೆದ ಪಾವೊ ಬಳಿಕ ಚಿತ್ರರಂಗಕ್ಕೆ ಬಂದವರು. ಅವರ ತ್ರೆಸೆಟ್ಟ ಸಿನಿಮಾಕ್ಕೆ ಆರು ಅಂತಾರಾಷ್ಟ್ರೀಯ ಪ್ರಶಸ್ತಿ ಒಳಗೊಂಡಂತೆ ಹಲವು ಪುರಸ್ಕಾರಗಳನ್ನು ಪಡೆದಿದೆ. ಸುಮಾರು ೩೦ ಕ್ಕೂ ಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಗಿದೆ.
ಇದನ್ನೂ ಓದಿ: Uttarkashi: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಮಾನಸಿಕ ಒತ್ತಡ ನಿವಾರಿಸಲು ಅಗತ್ಯ ಕ್ರಮ