Advertisement
ಜಿಲ್ಲೆಯ ಶಿಗ್ಗಾವಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿತ್ತು. ಮೂಲ ಸೌಕರ್ಯದ ಕೊರತೆ, ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಕ್ಷೇತ್ರದಲ್ಲಿ 2 ಏತ ನೀರಾವರಿ ಯೋಜನೆ ಅನುಷ್ಠಾನದ ಮೂಲಕ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗ್ರಾಮೀಣ, ಜಿಲ್ಲಾ ರಸ್ತೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿ 2 ಸಾವಿರ ಕಿ.ಮೀ. ರಸ್ತೆಗಳ ನಿರ್ಮಾಣವಾಗಿದೆ ಎಂದರು.ಬಡತನ ಶಾಪವಲ್ಲ. ಸಾಯುವವರೆಗೆ ಬಡತನ ಇರಬೇಕಿಲ್ಲ. ಪ್ರಾಮಾಣಿಕತೆಯಿಂದ ದುಡಿಯಲು ಅವಕಾಶ ಕೊಟ್ಟಿದ್ದೇವೆ. ಈ ಭಾಗದಲ್ಲಿ ಅತಿ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಶಹರಗಳ ಸಂಪೂರ್ಣ ಅಭಿವೃದ್ಧಿ, ಪ್ರತಿ ಮನೆಗೆ ನಳದಿಂದ ನೀರು ಕೊಡುತ್ತಿದ್ದೇವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಜಲಜೀವನ್ ಮಿಷನ್ ಅಡಿ ಎಲ್ಲ ಹಳ್ಳಿಗಳಿಗೂ ನೀರಿನ ಸೌಕರ್ಯ ಕೊಡುತ್ತಿದೆ. ಹೀಗಾಗಿ ಅಭಿವೃದ್ಧಿಗಾಗಿ ಜನರು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಚಿತ್ರನಟ ಕಿಚ್ಚ ಸುದೀಪ್ ಮಾತನಾಡಿ, ಜನಮನ ಗೆದ್ದ ಸಿಎಂ ಬೊಮ್ಮಾಯಿ ಮಾಮಗೆ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕಿದೆ. ಜನರ ಒಳಿತಿಗಾಗಿ ಅವರನ್ನು ಬೆಂಬಲಿಸಬೇಕು. ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿ ಕೆಲಸಗಳನ್ನು ಮೆಚ್ಚುತ್ತೇನೆ. ನಿಮ್ಮ ನಂಬಿಕೆ ಇದ್ದರೆ ಕೆಲಸ ಚೆನ್ನಾಗಿ ಆಗುತ್ತದೆ. “ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ’ ಹಾಡನ್ನು ಉದಾಹರಿಸಿದರು. ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ
ಜೀವನದ ಕೊನೆ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಕ್ಷೇತ್ರ ಬದಲಿಸುವ, ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ಮಾಲಕರು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
Related Articles
ಸುಂದರವಾಗಿ ಸುಸ್ವಾಗತ ನೀಡಿ ಪ್ರೀತಿ ತೋರಿದ್ದೀರಿ. ಬೊಮ್ಮಾಯಿ ಮಾಮ ಅವರು ಕಡಿಮೆ ಅವ ಧಿಯಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಇವರು ನಾಮ್ ಕೆ ವಾಸ್ತೆ ಅಲ್ಲ, ಕಾಮ್ ಕೆ ವಾಸ್ತೆ ಸಿಎಂ ಎಂದು ನಾಯಕ ನಟ ಕಿಚ್ಚ ಸುದೀಪ ಹೇಳಿದರು.
Advertisement