Advertisement

ಮೋದಿ,ಶಾ,ಹೆಗಡೆ ನನ್ನ ಪ್ರಕಾರ ಹಿಂದುಗಳಲ್ಲ: ನಟ ರೈ 

02:30 PM Jan 19, 2018 | |

ಹೈದರಾಬಾದ್‌: ಬಹುಭಾಷಾ ನಟ ಪ್ರಕಾಶ್‌ ರೈ ಅವರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಮತ್ತೆ ಕಿಡಿ ಕಾರಿದ್ದು, ಅವರು ನನ್ನ ಪ್ರಕಾರ ಹಿಂದುಗಳೇ ಅಲ್ಲ ಎಂದಿದ್ದಾರೆ.

Advertisement

ಇಂಡಿಯಾ ಟುಡೇ ವಾಹಿನಿ ನಡೆಸಿದ ಸೌತ್‌ ಕನ್‌ಕ್ಲೇವ್‌ ನಲ್ಲಿ ಮಾತನಾಡುವ ವೇಳೆ ರೈ ‘ನಾನು ಹಿಂದು ವಿರೋಧಿಯಲ್ಲ. ಆದರೆ ಮೋದಿ ವಿರೋಧಿ, ಶಾ ವಿರೋಧಿ, ಹೆಗಡೆ ವಿರೋಧಿ. ನನ್ನ ಪ್ರಕಾರ ಅವರು ಹಿಂದೂಗಳೇ ಅಲ್ಲ. ಕೊಲ್ಲುವುದನ್ನು ಬೆಂಬಲಿಸುವವರು ಹಿಂದುಗಳಲ್ಲ. ಎಂದರು.

ಸಭೆಯಲ್ಲೇ ವಿರೋಧಿಸಿದ ಬಿಜೆಪಿ ವಕ್ತಾರ 

ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದ ತೆಲಂಗಾಣದ ಬಿಜೆಪಿ  ವಕ್ತಾರ ವಿರೋಧ ವ್ಯಕ್ತ ಪಡಿಸಿ ‘ನೀವು ಮಾತನಾಡಿದರೆ ವಾಕ್‌ ಸ್ವಾತಂತ್ರ್ಯವಾಗುತ್ತದೆ, ಅವರು ಮಾತನಾಡಿದರೆ ಮತೀಯತೆಯೇ’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next