Advertisement

Video: ಇನ್ನು 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

03:23 PM Dec 28, 2024 | Team Udayavani |

ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು 70 ಅಡಿ ಎತ್ತರ ಸೇತುವೆಯಿಂದ ಗಂಗಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬ್ರಜ್‌ಘಾಟ್ ನಲ್ಲಿ ಶುಕ್ರವಾರ(ಡಿ.27) ರಂದು ನಡೆದಿದೆ.

Advertisement

ಶುಕ್ರವಾರ ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಜ್‌ಘಾಟ್ ಗೆ ಬಂದ ಯುವತಿಯೊಬ್ಬಳು ಇಲ್ಲಿನ ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಅದರಂತೆ ಸುಮಾರು ಎಪ್ಪತ್ತು ಅಡಿ ಎತ್ತರದಲ್ಲಿರುವ ಸೇತುವೆ ಮೇಲೆ ನಿಂತ ಯುವತಿ ಅಲ್ಲಿದ್ದ ತಡೆಬೇಲಿಯನ್ನು ಹತ್ತಿ ಕೆಲ ಹೊತ್ತು ನಿಂತಿದ್ದಾಳೆ ಆದರೆ ಅಲ್ಲೇ ಕೆಳಗಿದ್ದ ಸ್ಥಳೀಯರು ಯುವತಿ ನದಿಗೆ ಹಾರಲು ಯತ್ನಿಸಿರುವುದನ್ನು ಗಮನಿಸಿದ್ದಾರೆ ಅದರಂತೆ ಯುವತಿಯ ರಕ್ಷಣೆಗೆ ತಯಾರಾಗಿ ನಿಂತಿದ್ದರು ಸೇತುವೆಯ ಮೇಲಿದ್ದ ಯುವತಿ ಕೆಲಹೊತ್ತು ಕಾದು ಬಳಿಕ ಎಪ್ಪತ್ತು ಅಡಿ ಎತ್ತರದಿಂದ ಗಂಗಾ ನದಿಗೆ ಜಿಗಿದಿದ್ದಾಳೆ, ಯುವತಿ ಹಾರುತ್ತಿದ್ದಂತೆ ನದಿ ದಡದಲ್ಲಿದ್ದ ರಕ್ಷಣಾ ತಂಡ ಕೂಡಲೇ ಬೋಟ್ ದೋಣಿ ಮೂಲಕ ತೆರಳಿ ಯುವತಿಯನ್ನು ಕ್ಷಣ ಮಾತ್ರದಲ್ಲಿ ರಕ್ಷಣೆ ಮಾಡಿದ್ದಾರೆ.

ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಯುವತಿ ಬದುಕುಳಿದಿದ್ದಾಳೆ ಎಂದು ರಕ್ಷಣಾ ತಂಡ ಮಾಹಿತಿ ನೀಡಿದೆ.

ಜನವರಿಯಲ್ಲಿ ಮದುವೆ:
ರಕ್ಷಣೆ ಮಾಡಿದ ಬಳಿಕ ಯುವತಿಯನ್ನು ರಕ್ಷಣಾ ತಂಡ ವಿಚಾರಿಸಿದಾಗ ತನಗೆ ಮುಂಬರುವ ಜನವರಿ 16ರಂದು ಮದುವೆ ನಿಶ್ಚಯವಾಗಿತ್ತು ಆದರೆ ಕುಟುಂಬದ ನಡುವೆ ನಡೆದ ವೈಮನಸ್ಸಿನಿಂದ ನಾನು ಆತ್ಮಹತ್ಯೆ ಮಾಡಿ ಕೊಳ್ಳಲು ನಿರ್ಧರಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ. ಯುವತಿಯಿಂದ ಮಾಹಿತಿ ಪಡೆದು ಬಳಿಕ ಸಂಬಂಧಿಕರನ್ನು ಕರೆಸಿ ಅವರ ಜೊತೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಂದ್ರಕಾಂತ್ ಯಾದವ್ ತಿಳಿಸಿದ್ದಾರೆ.

Advertisement

ಸದ್ಯ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಗಂಗಾ ನದಿಗೆ ಹಾರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Advertisement

Udayavani is now on Telegram. Click here to join our channel and stay updated with the latest news.

Next