Advertisement

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

09:39 PM Oct 25, 2021 | Team Udayavani |

ಹೈದರಾಬಾದ್‌: ಹೈದರಾಬಾದ್‌ನ ಬಯೋಲಾಜಿಕಲ್‌ ಇ ಲಿಮಿಟೆಡ್‌ (ಬಿಇ) ಸಂಸ್ಥೆ ತಯಾರಿಸಿರುವ ಕೊಬ್ರೆವ್ಯಾಕ್ಸ್‌ ಕೋವಿಡ್‌ ಲಸಿಕೆಯು 3ನೇ ಹಂತದ ಪ್ರಯೋಗದಲ್ಲಿದೆ.

Advertisement

ನವೆಂಬರ್‌ ಅಂತ್ಯದ ವೇಳೆಗೆ ಬಳಕೆಗೆ ಬರುವ ಸಾಧ್ಯತೆಯಿದೆ. ಹೀಗೆಂದು ಸಂಸ್ಥೆಯ ಎಂಡಿ ಮಹಿಮಾ ದತ್ಲಾ ತಿಳಿಸಿದ್ದಾರೆ.

ಲಸಿಕೆಯನ್ನು ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಕೇಂದ್ರೀಯ ಔಷಧ ಪ್ರಯೋಗಾಲಯ(ಸಿಡಿಎಲ್‌)ಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.

ನವೆಂಬರ್‌ ಅಂತ್ಯಕ್ಕೆ ಔಷಧ ನಿಯಂತ್ರಕದಿಂದ ಪರವಾನಗಿ ಸಿಗುವ ಸಾಧ್ಯತೆಯಿದೆ.

ಒಂದು ತಿಂಗಳ ನಂತರ ಮಕ್ಕಳಿಗೂ ಈ ಲಸಿಕೆ ಬಳಕೆಗೆ ಪರವಾನಗಿ ಸಿಗುವ ಸಾಧ್ಯತೆಯಿದೆ. ಬಿಡುಗಡೆಗಾಗಿ 100 ಮಿಲಿಯನ್‌ ಡೋಸ್‌ ಲಸಿಕೆ ಸಿದ್ಧಮಾಡಿಕೊಳ್ಳುತ್ತಿದೆ ಎಂದು ಮಹಿಮಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next