Advertisement

ISRO ಯಶಸ್ಸು ;ಬಾಹ್ಯಾಕಾಶದಲ್ಲಿ ಮೊದಲ ಎಲೆ ಬಿಟ್ಟ ಅಲಸಂಡೆ ಕಾಳು

08:10 AM Jan 07, 2025 | Team Udayavani |

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಇಸ್ರೋ ಕೈಗೊಂಡಿದ್ದ ಯೋಜನೆಯಲ್ಲಿ ಮತ್ತೂಂದು ಮೈಲುಗಲ್ಲು ಸಾಧಿಸಿದೆ. ಪಿಒಇಎಂ-4 ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಅಲಸಂಡೆ ಬೀಜಗಳು ಎರಡು ಎಲೆ ಬಿಡುವ ಹಂತಕ್ಕೆ ಬೆಳವಣಿಗೆ ಕಂಡಿವೆ. ಸಸ್ಯ ಬೆಳವಣಿಗೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಈ ಯೋಜನೆಯನ್ನು ಡಿ.30ರಂದು ಇಸ್ರೋ ಉಡಾವಣೆ ಮಾಡಿತ್ತು. ಗುರುತ್ವಾಕರ್ಷಣೆಯಿಂದ ದೂರವಾಗಿ, ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ಅಧ್ಯಯನ ಮಾಡುವುದು ಇದರ ಉದ್ದೇಶವಾಗಿತ್ತು. ಪ್ರಸ್ತುತ ಸಸ್ಯದಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ಇಸ್ರೋ ಅಧ್ಯಯನ ಮಾಡುತ್ತಿದೆ.

Advertisement

ನಾಡಿದ್ದು ಉಪಗ್ರಹ ಡಾಕಿಂಗ್‌ ಪ್ರಕ್ರಿಯೆ
ಇಸ್ರೋ ಉಡಾವಣೆ ಮಾಡಿರುವ ಸ್ಪೇಡ್‌ಎಕ್ಸ್‌ ಉಪಗ್ರಹಗಳ ಬಾಹ್ಯಾ ಕಾಶ ಡಾಕಿಂಗ್‌ ಪ್ರಕ್ರಿಯೆ ಜ.9 ರಂದು ಕೈಗೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ. ಈ ಮೊದಲು ಜ.7 ರಂದು ಈ ಪ್ರಕ್ರಿಯೆಯನ್ನು ಕೈಗೊ ಳ್ಳಲು ಉದ್ದೇಶಿಸಲಾಗಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಬೇಕಿರುವ ಕಾರಣ ಮುಂದೂಡಿಕೆ ಮಾಡಲಾಗಿದೆ. ಗಗನಯಾನ ಸೇರಿ ಮುಂಬರುವ ಇಸ್ರೋ ಯೋಜ­ನೆ ಗಳಿಗೆ ಅಗತ್ಯವಿರುವ ಬಾಹ್ಯಾಕಾಶ ಡಾಕಿಂಗ್‌ ಸಾಧಿಸಲು ಇಸ್ರೋ ಈ ಪ್ರಯೋಗವನ್ನು ಕೈಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next