Advertisement

ಗ್ಯಾಂಗ್‌ ರೇಪ್‌: ಎಐಎಂಐಎಂ ಶಾಸಕನ ಮಗ, ಅಳಿಯನ ಸೆರೆ

12:52 AM Jun 09, 2022 | Team Udayavani |

ಹೈದರಾಬಾದ್‌: ಕಳೆದ ತಿಂಗಳು ತೆಲಂಗಾಣದ ಹೈದರಾಬಾದ್‌ನಲ್ಲಿ 17 ವರ್ಷದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಪೊಲೀಸರು ಮಂಗಳವಾರ ಎಐಎಂಐಎಂ ಶಾಸಕರೊಬ್ಬರ ಮಗ ಹಾಗೂ ಅಳಿಯನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದಂತಾಗಿದೆ.

Advertisement

ಶಾಸಕರ ಮಗನ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಅತ್ಯಾಚಾರದ ಆರೋಪ ಆತನ ವಿರುದ್ಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಆರೋಪಿಗಳು ಅತ್ಯಾಚಾರಕ್ಕೆ ಬಳಸಿದ ಇನೋವಾ ಕಾರು ಆರೋಪಿಯ ತಂದೆಗೆ ಸರಕಾರ ನೀಡಿರುವ ಕಾರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 28ರಂದು ಪಬ್‌ನಲ್ಲಿದ್ದ ಯುವತಿಯನ್ನು ಮನೆಗೆ ಬಿಡುವ ನೆಪದಲ್ಲಿ ಎಂಟು ಮಂದಿ ಅಪ್ರಾಪ್ತರು 2 ಕಾರಿನಲ್ಲಿ ಕರೆದೊಯ್ದಿದ್ದಾರೆ.

ಅವರು ಆಕೆಗೆ ಮುತ್ತಿಡುವ ವೀಡಿಯೋಗಳನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ಜುಬಿಲಿ ಹಿಲ್ಸ್‌ ಬಳಿ ಇನೋವಾ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next