Advertisement

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

11:43 PM Nov 25, 2024 | Shreeram Nayak |

ಶಿಕಾರಿಪುರ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ರವಿವಾರ ತಂದೆ ಹಾಗೂ ಮಗನ ಮಧ್ಯೆ ನಡೆದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.

Advertisement

ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ಮುಸ್ತಾಫ ಬೇಗ್‌ (42) ಕೊಲೆಯಾದವರು. ಊಟ ಮಾಡುವ ವೇಳೆ ತಂದೆ ಮುಸ್ತಾಫ ಬೇಗ್‌ ಹಾಗೂ ಮಗ ಶಾಹಿದ್‌ ಬೇಗ್‌ (22) ಮಧ್ಯೆ ಜಗಳವಾಗಿದೆ.

ಆಗ ಪುತ್ರ ಶಾಹಿದ್‌ ಬೇಗ್‌ ಕಬ್ಬಿಣದ ಸುತ್ತಿಗೆಯಿಂದ ತಂದೆಯ ತಲೆಗೆ ಹೊಡೆದಿದ್ದು, ಅವರು ಮೃತಪಟ್ಟಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next