Advertisement

ಶಿಕ್ಷೆಗೊಳಗಾದ ವ್ಯಕ್ತಿಗೆ ಕ್ಷಮಾದಾನ… ಹಂಗೇರಿ ಅಧ್ಯಕ್ಷ ಸ್ಥಾನಕ್ಕೆ ನೊವಾಕ್ ರಾಜೀನಾಮೆ

09:56 AM Feb 11, 2024 | Team Udayavani |

ಬುಡಾಪೆಸ್ಟ್: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ಕ್ಷಮಾದಾನ ನೀಡಿದ್ದ ಕಾರಣಕ್ಕೆ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಹಂಗೇರಿ ಅಧ್ಯಕ್ಷೆ ಕಟಲಿನ್ ನೊವಾಕ್ ಅವರು ಶನಿವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಕ್ಯಾಟಲಿನ್ ನೊವಾಕ್ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆಯನ್ನು ಮನ್ನಾ ಮಾಡಿದ್ದರು, ಇದನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು ಶುಕ್ರವಾರ ಸಂಜೆ ಅಧ್ಯಕ್ಷೀಯ ಭವನದ ಹೊರಗೆ ವಿರೋಧ ಪಕ್ಷದ ರಾಜಕಾರಣಿಗಳು ಪ್ರತಿಭಟನೆಗೆ ಇಳಿದಿದ್ದರು ಇದರಿಂದಾಗಿ ಕ್ಯಾಟಲಿನ್ ನೊವಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

46 ವರ್ಷದ ನೊವಾಕ್ ತನ್ನ ತಪ್ಪನ್ನು ಒಪ್ಪಿಕೊಂಡು ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು ‘ಯಾರಿಗೆ ನನ್ನಿಂದಾಗಿ ನೋವಾಗಿದೆಯೋ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾಳೆ. ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವ ಪರವಾಗಿ ನಾನು ಯಾವಾಗಲೂ ಇದ್ದೇನೆ, ಈಗಲೂ ಇದ್ದೇನೆ ಮತ್ತು ಇನ್ನು ಮುಂದೆಯೂ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕ್ಯಾಟ್ಲಿನ್ ನೊವಾಕ್ ಹಂಗೇರಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಅವರು ಮಾರ್ಚ್ 2022 ರಲ್ಲಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2023 ರ ಏಪ್ರಿಲ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಹಂಗೇರಿಯ ಭೇಟಿಗೆ ಮುಂಚಿತವಾಗಿ ನೋವಾಕ್ ಸುಮಾರು ಎರಡು ಡಜನ್ ಜನರನ್ನು ಕ್ಷಮಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಈ ಕ್ರಮದಿಂದ ಪ್ರಯೋಜನ ಪಡೆದ ಜನರಲ್ಲಿ ಒಬ್ಬರು ಮಕ್ಕಳ ಮನೆಯ ಉಪ ನಿರ್ದೇಶಕರು ಎಂದು ಇತ್ತೀಚೆಗೆ ಬಹಿರಂಗಪಡಿಸಲಾಯಿತು.

Advertisement

ಕಳೆದ ವರ್ಷ ಮಕ್ಕಳ ಗೃಹದ ಮಾಜಿ ಉಪನಿರ್ದೇಶಕರನ್ನು ಕ್ಷಮಿಸಿದ ನಂತರ ಈ ವಿಷಯ ಪ್ರಾರಂಭವಾಯಿತು. ಮಕ್ಕಳ ಮನೆಯ ಮಾಜಿ ಉಪನಿರ್ದೇಶಕರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಮುಚ್ಚಿಟ್ಟಿದ್ದರು. ಏಪ್ರಿಲ್ 2023 ರಲ್ಲಿ ಬುಡಾಪೆಸ್ಟ್‌ಗೆ ಪೋಪ್ ಭೇಟಿ ನೀಡಿದ ಸಂದರ್ಭದಲ್ಲಿ ಅಪರಾಧಿಯನ್ನು ಕ್ಷಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ವಿಷಯ ಬೆಳಕಿಗೆ ಬಂದ ಕೂಡಲೇ ವಿಪಕ್ಷ ನಾಯಕರು ಕೈಟ್ಲಿನ್ ನೊವಾಕ್ ರಾಜೀನಾಮೆಗೆ ಒತ್ತಾಯ ಮಾಡಲಾರಂಭಿಸಿದ್ದಾರೆ.


ಇದನ್ನೂ ಓದಿ: Mysore: ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ… ನಾಯಕರ ಜೊತೆ ಹೈ ಪ್ರೊಫೈಲ್ ಮೀಟಿಂಗ್

Advertisement

Udayavani is now on Telegram. Click here to join our channel and stay updated with the latest news.

Next