Advertisement

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

07:50 PM Dec 24, 2024 | Team Udayavani |

ಕೊರಟಗೆರೆ: ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಜಟ್ಟಿಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2ನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ಗಂಗಾದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಅಗ್ರಹಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಗೋವಿಂದರಾಜು ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಗಂಗಾದೇವಿ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಈ ಹಿಂದೆ ಆಯ್ಕೆಯಾಗಿದ್ದ ಗೋವಿಂದರಾಜು ಮುಂದುವರೆಯಲಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರಿ ಅಧಿಕಾರಿ ಗುರುರಾಜು ಘೋಷಣೆ ಮಾಡಿದರು.

ನೂತನ ಅಧ್ಯಕ್ಷೆ ಗಂಗಾದೇವಿ ಮಾತನಾಡಿ, ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಆಶೀರ್ವಾದ ಮತ್ತು ಸಂಘದ ಎಲ್ಲಾ ನಿರ್ದೇಶಕ ಸಹಕಾರದಿಂದ ಇಂದು ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದಿಂದ ಬರುವ ಸವಲತ್ತುಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ಗ್ರಾಮೀಣ ಭಾಗದ ಸಣ್ಣ ರೈತರಿಗೆ ಸಹಕಾರ ಸಂಘಗಳು ಅತ್ಯಂತ ಉಪಯುಕ್ತ ಕೇಂದ್ರಗಳಾಗಿದ್ದು, ಸಹಕಾರ ಸಂಘದಿಂದ ಶೂನ್ಯ ಬಡ್ಡಿ ಸೇರಿದಂತೆ ಅನೇಕ ಯೋಜನೆಗಳನ್ನು ರಾಜ್ಯ ಸಹಕಾರಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಂದಿದ್ದು, ಇಂತಹ ಹತ್ತು ಹಲವು ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು.

ನೂತನವಾಗಿ ಆಯ್ಕೆಯಾದ ಗಂಗಾದೇವಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ಡಿಸಿಸಿ ಮೇಲ್ವಿಚಾರಕ ತಿಮ್ಮರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗ್ರಾ.ಪಂ. ಉಪಾದ್ಯಕ್ಷ ಹಾಗೂ ಸಂಘದ ನಿರ್ದೇಶಕ ಮಂಜುನಾಥ್, ನಿರ್ದೇಶಕರಾದ ಸಣ್ಣಕಾಮಯ್ಯ, ಭೀಮಣ್ಣ, ಪುಟ್ಟರಾಜು, ಮಂಜುನಾಥ್, ಶಿವಶಂಕರ್, ವೆಂಕಟೇಶ್, ವನಿತ, ಸಿದ್ದಗಂಗಮ್ಮ, ಸುನೀತ, ತಿಮ್ಮರಾಜು, ಕಾರ್ಯದರ್ಶಿ ರಮೇಶ್, ಮುಖಂಡರಾದ ಬಸವರಾಜು, ಶಿವಣ್ಣ,  ವೀರಕ್ಯಾತಯ್ಯ, ನಾಗರಾಜು, ಮಧು, ಮಂಜುನಾಥ್. ವೆಂಕಟೇಶ್, ಚಲುವರಾಜು, ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next