Advertisement

ಮಾನವ ಕಳ್ಳಸಾಗಣೆ ಪ್ರಕರಣ: ಇಬ್ಬರು ಬಾಂಗ್ಲಾ ಪ್ರಜೆಗಳ ಸೆರೆ

11:56 AM Feb 24, 2024 | Team Udayavani |

ಬೆಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.

Advertisement

ಮೊಹಮ್ಮದ್‌ ಸಜ್ಜಿದ್‌ ಹಲ್ದಾರ್‌ ಮತ್ತು ಇದ್ರಿಸ್‌ ಅವರನ್ನು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಪೊಲೀಸರ ನೆರವಿನೊಂದಿಗೆ ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಮೂ ಲಕ ಪ್ರಕರಣದಲ್ಲಿ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

2023ರ ನವೆಂಬರ್‌ನಲ್ಲಿ ಎನ್‌ಐಎ ಕರ್ನಾಟಕ ಸೇರಿ ವಿವಿಧೆಡೆ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು ಭಾರತ- ಬಾಂಗ್ಲಾದೇಶ ಗಡಿಯಲ್ಲಿನ ಬೆನಾಪೋಲ್‌ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿ ಸಿ¨ªಾರೆ ಎಂಬ ಮಾಹಿತಿ ಪಡೆದುಕೊಂಡಿತ್ತು. ಬಳಿಕ ಆರೋಪಿಗಳ ಬೆನ್ನು ಬಿದ್ದಿದ್ದ ಎನ್‌ಐಎ, ರಾಜ್ಯದ ಐಎಸ್‌ಡಿ ಅಧಿಕಾರಿಗಳ ಸಹಾ ಯದಿಂದ ಬೆಂಗಳೂರಿನ ರಾಮ ಮೂರ್ತಿ ನಗರದ ಕೆ.ಚನ್ನಸಂದ್ರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವ ಘಟಕ ವನ್ನು ಸ್ಥಾಪಿಸಿದ್ದ ಹಲ್ದಾರ್‌, ಇತರ ಬಾಂಗ್ಲಾ ದೇಶಿ ಪ್ರಜೆಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ.

ಇನ್ನು ಬೆಂಗಳೂರಿನ ಅನಂದಪುರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬೇರ್ಪಡಿಸುವ ಘಟಕ ಸ್ಥಾಪಿಸಿದ್ದ ಇದ್ರಿಸ್‌ ಬಾಂಗ್ಲಾದೇಶದಿಂದ ಅಕ್ರಮವಾಗಿ ಕರೆತಂದಿದ್ದ 20ಕ್ಕೂ ಹೆಚ್ಚು ಕುಟುಂಬಗಳಿಗೆ ಟೆಂಟ್‌ ನಿರ್ಮಿಸಿಕೊಟ್ಟಿದ್ದ ಎಂಬುದು ಬಯಲಾಗಿತ್ತು. ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಅಸ್ಸಾಂ, ತ್ರಿಪುರಾ ಮತ್ತು ಗಡಿಯಾಚೆಗಿನ ದೇಶಗಳಲ್ಲಿನ ಕಳ್ಳಸಾಗಾಣಿಕೆದಾರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಖಚಿತ ಮಾಹಿತ ಪಡೆದಿದ್ದ ಎನ್‌ಐಎ ಅಧಿಕಾರಿಗಳು 2023ರ ನ.7ರಂದು ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದರು. ಭಾರತ-ಬಾಂಗ್ಲಾದೇಶದ ಗಡಿಯ ಮೂಲಕ ಭಾರತಕ್ಕೆ ಮಾನವ ಕಳ್ಳಸಾಗಣೆ ಮಾಡುವ ಹಾಗೂ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಕೊಡುವ ಕಳ್ಳಸಾಗಣೆದಾರರ ದೊಡ್ಡ ಜಾಲವನ್ನು ಎನ್‌ಐಎ ತನಿಖೆ ವೇಳೆ ಪತ್ತೆ ಹಚ್ಚಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next