ಬೆಂಗಳೂರು: ಅಲ್ಟ್ರಾಸೌಂಡ್ ಸ್ಕಾನಿಂಗ್ ಯಂತ್ರದ ಎರಡು ಪ್ರೋಬ್ಸ್ಗಳನ್ನು ಕಳವು ಮಾಡಿದ್ದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿಯ ಚುಡೆನಾಪುರ ನಿವಾಸಿ ಹೇಮಲತಾ (40) ಮತ್ತು ರಾಜಗೋಪಾಲ ನಗರ ನಿವಾಸಿ ಎನ್.ಸಿ.ಮಂಜುನಾಥ್ (44) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಪ್ರೋಬ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್ನ ವಾಸವಿ ಆಸ್ಪತ್ರೆಯ ರೇಡಿಯೋಲಾಜಿ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡು ತ್ತಿ ದ್ದರು. 2 ಪ್ರೋಬ್ಸ್ ಗಳನ್ನು ಕಳವು ಮಾಡಿದ್ದಾರೆ. ಸೆ.1 2 ರಂದು ಹೌಸ್ಕೀಪಿಂಗ್ ಮಹಿಳೆ ಪ್ರೋಬ್ಸ್ ಗಳು ಕಾಣದಿರುವ ಬಗ್ಗೆ ಆಸ್ಪತ್ರೆಯ ಸಿಇಒ ಡಾ ಗಾಯಿತ್ರಿಗೆ ಮಾಹಿತಿ ನೀಡಿದ್ದರು. ಬಳಿಕ ಗಾಯಿತ್ರಿ ದೂರು ನೀಡಿದ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಕೃತ್ಯ ಬಳಿಕ ಕೆಲಸ ಬಿಟ್ಟಿದ್ದ ಆರೋಪಿಗಳು: ಕೃತ್ಯ ಎಸಗಿದ ಕೆಲ ದಿನಗಳ ಬಳಿಕ ಆರೋಪಿ ಗಳು, ಕೆಲಸ ಬಿಟ್ಟು ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೂಂದೆಡೆ ಆಸ್ಪತ್ರೆ ಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಹೇಮಲತಾ ಬಗ್ಗೆ ಅನುಮಾನ ಬಂದಿತ್ತು. ಬಳಿಕ ಆಕೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾಗಿದ್ದು, ಆಕೆಯನ್ನು ವಶಕ್ಕೆ ಪಡೆದುವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಳು. ಅಲ್ಲದೆ, ಕಳವು ಪ್ರೋಬ್ಸ್ಗಳನ್ನು ಮಂಜುನಾಥ್ಗೆ ಕೊಟ್ಟಿರು ವು ದಾಗಿ ಹೇಳಿದ್ದಳು. ಆತನ ಮನೆ ಮೇಲೆ ದಾಳಿ ನಡೆಸಿದಾಗ ಅವುಗಳು ಮನೆಯಲ್ಲೇ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.