Advertisement

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

10:15 AM Nov 18, 2024 | Team Udayavani |

ಬೆಂಗಳೂರು: ಮನೆ ಮಾಲಿಕರು ಮನೆಯಲ್ಲಿದ್ದ ವೇಳೆಯಲ್ಲೇ ಮನೆಗೆ ನುಗ್ಗಿದ ಕಳ್ಳನೊಬ್ಬ ಲಕ್ಷಾಂ ತರ ರೂ. ಮೌಲ್ಯದ ಚಿನ್ನಾ ಭರಣ ಮತ್ತು ಸಾವಿರಾರು ರೂ. ನಗದು ದೋ ಚಿದ್ದ ಆರೋಪಿ ಯನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶಂಕರಪುರ ನಿವಾಸಿ ಅಫ್ರಿದಿ (32) ಬಂಧಿತ ಆರೋಪಿ.

ಈತ ಸೆ.28 ರಂದು ಸಂಜೆ 4 ಗಂಟೆ ಸುಮಾರಿಗೆ ಬಸವನ ಗುಡಿಯ ಉತ್ತರಾಧಿಮಠ ರಸ್ತೆಯಲ್ಲಿರುವ ಸಮೀರ್‌ ಆರ್‌. ಕಟ್ಟಿ ಎಂಬುವರ ಮನೆಯಲ್ಲಿ 20 ಗ್ರಾಂ ಬಂಗಾರ ಮತ್ತು 67 ಸಾವಿರ ರೂ. ನಗದು ದೋಚಿ ಪರಾರಿ ಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸೆ.28 ರಂದು ಏಕಾದಶಿ ಪ್ರಯುಕ್ತ ಸಮೀರ್‌ ಅವರ ತಾಯಿ ಹಾಗೂ ಅವರ ಸ್ನೇಹಿತೆಯರು ಅಡುಗೆ ಕೋಣೆಯಲ್ಲಿ ರಾಮಭಜನೆ ಮಾಡುತ್ತಿದ್ದರು. ಸಮೀರ್‌ ಮೊದಲನೇ ಮಹಡಿಯಲ್ಲಿರುವ ತಮ್ಮ ಕೋಣೆಯಲ್ಲಿದ್ದರು. ಈ ಸಮಯದಲ್ಲಿ ಮನೆಯೊಳಗೆ ಪ್ರವೇಶಿಸಿದ ಆರೋಪಿ, ಸಮೀರ್‌ ತಂದೆ ಇರುವ ಕೋಣೆಯ ಒಳಗೆ ಹೋಗಿದ್ದಾನೆ. ಗಾಢ ನಿದ್ರೆಯಲ್ಲಿ ಅವರನ್ನು ನೋಡಿ, ರೂಂನಲ್ಲಿದ್ದ ಮೊಬೈಲ್‌ ಮತ್ತು 67,500 ರೂ. ನಗದು ಹಾಗೂ 12 ಗ್ರಾಂ ಚಿನ್ನದ ಉಂಗುರ ಹಾಗೂ 8 ಗ್ರಾಂನ ಒಂದು ಚಿನ್ನದ ನಾಣ್ಯವನ್ನು ಕದ್ದು ಪರಾರಿಯಾಗಿದ್ದ. ಆರೋಪಿ ಚಲನವಲನ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತುಎಂದು ಪೊಲೀಸರು ಹೇಳಿದರು.

ಸಾರ್ವಜನಿಕರು ಹಗಲು ಅಥವಾ ರಾತ್ರಿ ವೇಳೆ ಮಲಗುವಾಗ ಮರೆಯದೇ ಮನೆಯ ಬಾಗಿಲು ಹಾಗೂ ಕಿಟಕಿ ಚಿಲಕ ಹಾಕಿಕೊಂಡು ಮಲಗಬೇಕು. ಒಂದು ವೇಳೆ ಮೈ ಮರೆತರೆ ಕಳ್ಳರು ಮನೆ ಪ್ರವೇಶಿಸಿ ನಗದು ಆಭರಣ ದೋಚುತ್ತಾರೆ. ಒಂದು ವೇಳೆ ಮನೆಬಿಟ್ಟು ಹಲವು ದಿನಗಳ ಕಾಲ ಊರಿಗಳಿಗೆ ಹೋಗಬೇಕಾದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಸೂಕ್ತ. ●ಲೋಕೇಶ್‌ ಜಗಲಾಸರ್‌, ದಕ್ಷಿಣ ವಿಭಾಗ ಡಿಸಿಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next