ಇಂಥದ್ದೊಂದು ಪ್ರಶ್ನೆ ಬರೋದಕ್ಕೆ ಕಾರಣ, ಅಂಬರೀಶ್ ಅಭಿನಯದ ಹೊಸ ಚಿತ್ರ “ಅಂಬಿ ನಿಂಗೆ ವಯಸ್ಸಾಯ್ತೋ’. ಈ ಚಿತ್ರದ ವಿಶೇಷವೆಂದರೆ, ಇದರಲ್ಲಿ ಅಂಬರೀಶ್ ಅವರ ಕಿರುವಯಸ್ಸಿನ ಪಾತ್ರವನ್ನು ಸುದೀಪ್ ಮಾಡುತ್ತಿದ್ದಾರೆ.
Advertisement
ಮೂಲ ಚಿತ್ರವಾದ “ಪವರ್ ಪಾಂಡಿ’ಯಲ್ಲಿ ರಾಜಕಿರಣ್ ಅವರ ಕಿರುವಯಸ್ಸಿನ ಪಾತ್ರವನ್ನು ಧನುಶ್ ಮಾಡಿದ್ದರು. ಇಬ್ಬರೂ ಹೆಚ್ಚಾ ಕಡಿಮೆ ಒಂದೇ ಹೈಟಿನವರಾದ್ದರಿಂದ ಸಮಂಜಸವಾಗಿತ್ತು. ಆದರೆ, ಕನ್ನಡದಲ್ಲಿ ಅಂಬರೀಶ್ ಅವರ ಚಿಕ್ಕವಯಸ್ಸಿನ ಪಾತ್ರವನ್ನು ಸುದೀಪ್ ಮಾಡುತ್ತಿದ್ದಾರೆ ಎಂದರೆ ಹಲವರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ, ಅಂಬರೀಶ್ ಅವರು ಐದು ಪ್ಲಸ್ ಅಡಿ ಎತ್ತರವಿದ್ದಾರೆ.
Related Articles
Advertisement
ಶಾರುಖ್ ಖಾನ್ ಅವರ “ಫ್ಯಾನ್’ ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞಾನದ ಕಂಪೆನಿ ಸೇರಿದಂತೆ ದಿ ಬೆಸ್ಟ್ ಎನ್ನುವ ಗ್ರಾಫಿಕಲ್ ಟೀಮ್‌ನೊಂದಿಗೂ ಆ ಬಗ್ಗೆ ಚರ್ಚಿಸಲಾಗುತ್ತಿದೆ’ ಎನ್ನುತ್ತಾರೆ ಗುರುದತ್ ಗಾಣಿಗ. “ಇಲ್ಲಿ ಸುಮ್ಮನೆ ಕಮರ್ಷಿಯಲ್ ಆಗಿ ನೋಡುವುದಾದರೆ ಆ ಯೋಚನೆ ಮತ್ತು ಭಾವನೆ ಬರುವುದಿಲ್ಲ. ಕಮರ್ಷಿಯಲ್ ಪಾಯಿಂಟ್‌ನಲ್ಲಿ ಕಥೆ ಶುರುವಾಗುತ್ತೆ. ಅಂಬರೀಶ್‌ರಂತೆಯೇ ಯೌವ್ವನದ ಪಾತ್ರವನ್ನು ತೋರಿಸಬೇಕೆಂಬುದು ಮನಸ್ಸಲಿಲ್ಲ.
ಆದರೆ, ಅದು ಅಂಬರೀಶ್ ಅವರ ಯೌವ್ವನದ ಪಾತ್ರವೇ ಎಂಬುದನ್ನು ನಂಬುವಷ್ಟರಮಟ್ಟಿಗೆ ತೋರಿಸುತ್ತೇವೆ. ಸುದೀಪ್ ಅವರ ಯೌವ್ವನದ ಭಾಗ ಸುಮಾರು 25 ನಿಮಿಷಗಳಷ್ಟು ತೆರೆಯ ಮೇಲೆ ಬರಲಿದೆ. ಹಾಗೆ ನೋಡಿದರೆ, ಮೂಲ ಚಿತ್ರದಲ್ಲಿ ರಾಜ್‌ಕಿರಣ್ ಮತ್ತು ಧನುಷ್ ಅವರಿಬ್ಬರಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ, ಇಲ್ಲಿ ಸುದೀಪ್ ಮತ್ತು ಅಂಬರೀಷ್ ಅವರನ್ನು ಹೋಲಿಕೆ ಮಾಡಬಹುದು.
ಕಥೆ ಒಳಗೆ ಟ್ರಾವೆಲ್ ಆದಾಗ, ಮನಸ್ಸು ಸಹಜವಾಗಿಯೇ ನಂಬೋಕೆ ಶುರುವಾಗುತ್ತೆ. ಮೂಲ ಚಿತ್ರಕ್ಕಿಂತಲೂ ಇಲ್ಲಿ ಹೆಚ್ಚು ಶ್ರಮ ಹಾಕುತ್ತಿದ್ದೇವೆ. ಯಾರಿಗೂ ಯೌವ್ವನದ ಪಾತ್ರ ಅನುಮಾನ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸುತ್ತಾರೆ ಗುರುದತ್ ಗಾಣಿಗ. “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ ಡಿಸೆಂಬರ್ 7 ಅಥವಾ 8ರಿಂದ ಚಿತ್ರೀಕರಣ ಶುರುವಾಗಲಿದೆ.
ಅಂಬರೀಷ್ ಅವರ ಭಾಗದ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲಾಗುತ್ತದಂತೆ. ಆ ನಂತರ ಸುದೀಪ್ ಅವರ ಭಾಗ ಶುರುವಾಗಲಿದೆ. ಅಂಬರೀಶ್ ಅವರಿಗೆ ಸುಹಾಸಿನಿ ಜೋಡಿಯಾದರೆ, ಸುದೀಪ್ ಅವರಿಗೆ ಯಾರನ್ನು ಜೋಡಿ ಮಾಡಿದರೆ ಚೆನ್ನಾಗಿರುತ್ತೆ ಎಂಬ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ನಿರ್ಮಿಸುತ್ತಿದ್ದಾರೆ.