Advertisement

ಹಾಕಿ ವಿಶ್ವ ಲೀಗ್‌ ಫೈನಲ್‌ ಭಾರತ ಸೆಮಿಫೈನಲಿಗೆ

06:15 AM Dec 07, 2017 | Team Udayavani |

ಭುವನೇಶ್ವರ: ಆತಿಥೇಯ ಭಾರತವು ಅಮೋಘ ಆಟದ ಪ್ರದರ್ಶನ ನೀಡಿ ಒಲಿಂಪಿಕ್‌ ಬೆಳ್ಳಿ ವಿಜೇತ ಬೆಲ್ಜಿಯಂ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಹಾಕಿ ವಿಶ್ವ ಲೀಗ್‌ ಫೈನಲ್‌ನ ಸೆಮಿಫೈನಲ್‌ ತಲುಪಿದೆ. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು.

Advertisement

ಪಂದ್ಯದ ಬಹುತೇಕ ಸಮಯ ಮೈದಾನದ ಹೊರಗೆ ವಿಶ್ರಾಂತಿ ಪಡೆದಿದ್ದ ಗೋಲ್‌ಕೀಪರ್‌ ಆಕಾಶ್‌ ಚಿಕ್ತೆ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ಭಾರತಕ್ಕೆ ಈ ಕೂಟದಲ್ಲಿ ಮೊದಲ ಗೆಲುವನ್ನು ದೊರಕಿಸಿಕೊಟ್ಟರು.ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಆಕ್ರಮಣಕಾರಿಯಾಗಿ ಆಡಿದ್ದವು. ಇದರಿಂದಾಗಿ ಆರು ಗೋಲು ದಾಖಲಾಗಿದ್ದವು. ಭಾರತ 2-0 ಮುನ್ನಡೆ ಸಾಧಿಸಿದ ಬಳಿಕ ಬೆಲ್ಜಿಯಂ ಗೋಲು ಖಾತೆ ತೆರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next