Advertisement
ಶುಕ್ರವಾರ ಟ್ವೀಟ್ ಮಾಡಿರುವ ಕಂಗನಾ, “ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ, ನೀವೂ ಒಬ್ಬ ಮಹಿಳೆಯಾಗಿ ಮಹಾರಾಷ್ಟ್ರದಲ್ಲಿರುವ ನಿಮ್ಮ ಸರಕಾರವು ನನ್ನನ್ನು ನಡೆಸಿಕೊಂಡ ರೀತಿ ನಿಮಗೆ ದುಃಖ ತಂದಿಲ್ಲವೇ? ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರಕಾರಕ್ಕೆ ನೀವು ಕೋರಬಲ್ಲಿರಾ?’ ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ದಾವೂದ್ ಬಂಗಲೆ ಕಾಣುತ್ತಿಲ್ಲವೇ?: ಶುಕ್ರವಾರ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, “ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಟ್ಟಡಗಳನ್ನು ಕೆಡವದ ನೀವು ಕಂಗನಾ ಬಂಗಲೆಯನ್ನೇಕೆ ಕೆಡವಿದ್ದೀರಿ’ ಎಂದು ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಸುರಕ್ಷತಾ ನಿಯಮ ಉಲ್ಲಂಘಿಸಿದ ಮಾಧ್ಯಮಗಳು: ಬುಧವಾರ ಕಂಗನಾ ಅವರು ಆಗಮಿಸಿದ ಚಂಡಿಗಡ-ಮುಂಬೈ ಇಂಡಿಗೋ ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳು ಸುರಕ್ಷತಾ ನಿಯಮವನ್ನು ಉಲ್ಲಂ ಸಿರುವುದು ಬೆಳಕಿಗೆ ಬಂದಿದೆ. ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯ ಮಗಳನ್ನು ಗಾಳಿಗೆ ತೂರಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೀಗಾಗಿ ಈ ಕುರಿತು ವರದಿ ನೀಡುವಂತೆ ಇಂಡಿಗೋ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಸೂಚಿಸಿದೆ.
ಲಾಕ್‌ಡೌನ್ ವೇಳೆ 500 ಗ್ರಾಂ. ಗಾಂಜಾ ಕೊರಿಯರ್!ಕೋರ್ಟ್‌ನಲ್ಲಿ ರಿಯಾ ಜಾಮೀನಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಎನ್‌ಸಿಬಿ, ಏಪ್ರಿಲ್‌ನಲ್ಲಿ ಲಾಕ್‌ಡೌನ್ ವೇಳೆ ರಿಯಾ ಮತ್ತು ಸುಶಾಂತ್ 500 ಗ್ರಾಂ ಗಾಂಜಾವನ್ನು ಕೊರಿಯರ್ ಮೂಲಕ ತರಿಸಿಕೊಂಡಿದ್ದರು ಎಂದು ಹೇಳಿದೆ. ಲಾಕ್‌ಡೌನ್ ವೇಳೆ ರಿಯಾ ಮನೆಯಲ್ಲಿ ಕೆಲಕಾಲ ತಂಗಲು ಸುಶಾಂತ್ ನಿರ್ಧರಿಸಿದ್ದರು. ಅದಕ್ಕಾಗಿ ರಿಯಾ ಮನೆಗೇ ಗಾಂಜಾವನ್ನು ತರಿಸಿಕೊಳ್ಳಲು ನಿರ್ಣಯಿಸಿ, ಕೊರಿಯರ್ ಕಂಪನಿಯನ್ನು ಸಂಪರ್ಕಿಸಿದ್ದರು ಮತ್ತು 500 ಗ್ರಾಂ. ಗಾಂಜಾ ತರಿಸಿಕೊಂಡಿದ್ದರು ಎಂದು ಎನ್‌ಸಿಬಿ ತಿಳಿಸಿದೆ. ಈಗ ಇವರಿಗೆ ಜಾಮೀನು ನೀಡಿದರೆ, ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ ಎಂದೂ ಎನ್‌ಸಿಬಿ ಕೋರ್ಟ್‌ಗೆ ಹೇಳಿದೆ. ರಿಯಾ, ಶೋವಿಕ್‌ಗಿಲ್ಲ ಜಾಮೀನು
ಡ್ರಗ್ ಪ್ರಕರಣ ಸಂಬಂಧ ಬಂಧಿತರಾಗಿರುವ ರಿಯಾ ಚಕ್ರವರ್ತಿ, ಸೋದರ ಶೋವಿಕ್ ಹಾಗೂ ಇತರೆ ನಾಲ್ವರ ಜಾಮೀನು ಅರ್ಜಿಗಳನ್ನು ಶುಕ್ರವಾರ ಮುಂಬೈನ ವಿಶೇಷ ಕೋರ್ಟ್ ವಜಾ ಮಾಡಿದೆ. ಹೀಗಾಗಿ, ಸದ್ಯ ಎಲ್ಲ ಆರೋಪಿಗಳೂ ನ್ಯಾಯಾಂಗ ವಶದಲ್ಲೇ ಮುಂದುವರಿಯುವಂತಾಗಿದೆ. ತನಿಖೆಯು ಮಹತ್ವದ ಘಟ್ಟದಲ್ಲಿರುವ ಕಾರಣ ಈಗ ಜಾಮೀನು ನೀಡಲಾಗದು ಎಂದು ಕೋರ್ಟ್ ಹೇಳಿದೆ. ನನ್ನನ್ನು ಈ ಕೇಸಿನಲ್ಲಿ ಸುಖಾಸುಮ್ಮನೆ ಸಿಲುಕಿಸಲಾಗಿದೆ ಎಂದು ರಿಯಾ ವಾದಿಸಿದ್ದು, ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂದೂ ಆರೋಪಿಸಿದ್ದಾರೆ. ಉದ್ಧವ್ ಅಯೋಧ್ಯೆ ಭೇಟಿಗೆ ವಿರೋಧ
ಕಂಗನಾ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಅಯೋಧ್ಯೆಯ ಸಾಧು-ಸಂತರು ಹಾಗೂ ವಿಶ್ವ ಹಿಂದೂ ಪರಿಷತ್ ಗರಂ ಆಗಿದ್ದಾರೆ. ಉದ್ಧವ್ ಮತ್ತು ಶಿವಸೇನೆಗೆ ಇನ್ನು ಅಯೋಧ್ಯೆಗೆ ಸ್ವಾಗತವಿಲ್ಲ. ಅವರೇನಾದರೂ ಇಲ್ಲಿಗೆ ಬಂದರೆ ಇಲ್ಲಿನ ಸಾಧು-ಸಂತರ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ ಎಂದು ಹನುಮಾನ್ ಗಡಿ ದೇಗುಲದ ಅರ್ಚಕ ರಾದ ಮಹಾಂತ ರಾಜು
ದಾಸ್ ಹೇಳಿದ್ದಾರೆ.