Advertisement
ಈ ಆರೋಪವನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಂದಿರು ವಂತೆಯೇ ನ.15ರಂದು ಕಠ್ಮಂಡುವಿನಲ್ಲಿ ಸಭೆ ನಡೆಸಿದ ಈ ಸಂಘಟನೆಗಳು, ಮುಂಬಯಿಯಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ರೂಪಿಸಿದ್ದವು ಎಂದು ಫಡ್ನವೀಸ್ ಹೇಳಿದ್ದಾರೆ.
ಸಿಎಂ ಫಡ್ನವೀಸ್ ಆರೋಪವು ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತವಾಗಿದೆ. ಭಾರೀ ಪ್ರಮಾಣ ದ ಜನಬೆಂಬಲ ಪಡೆದ ಯಾತ್ರೆಗೆ ಮಸಿ ಬಳಿಯುವ ಯತ್ನ. ರಾಜ್ಯದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ನಾನಾ ಪಟೋಲೆ ಹೇಳಿದ್ದಾರೆ.