ಉಡುಪಿ: ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದದ್ದು ಶಿಕ್ಷಣ. ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ಅವರು ನಿಲ್ಲಬೇಕು. ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯದೆ ಪ್ರಚಾರ ಗಿಟ್ಟಿಸುತ್ತಿದ್ದಾರೆ .ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ ಭಾರತದಲ್ಲಿ ಏನೋ ನಡೆಯುತ್ತೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ. ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಭಾರತದಲ್ಲಿ ನಡೆಯುವುದಿಲ್ಲ. ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಪರೀಕ್ಷೆ ಬರೆಯಬೇಕು. ಪದವಿ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಈಗಲಾದರೂ ಸರಿ ಮಾಡಿಕೊಂಡು ಹೋಗಬೇಕು. ನಿಮ್ಮ ಹಿಂದೆ ನಿಂತ ಸಂಘಟನೆ, ಬದುಕಿನಲ್ಲಿ ಬರುವುದಿಲ್ಲ ಎಂದರು.
ಹಿಜಾಬ್‌ಗ ಸಂಬಂಧಿಸಿದಂತೆ ಹೈಕೋರ್ಟ್ ಸ್ಪಷ್ಟ ನಿರ್ಧಾರ ತಿಳಿಸಿದೆ. ಸಮವಸ್ತ್ರ ಧರಿಸಿ ಬರಬೇಕೆಂದು ಹೇಳಿರುವುದರಿಂದ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಕೂಡ ಇದನ್ನೇ ಹೇಳಿದೆ. ಹೈಕೋರ್ಟ್ ಆದೇಶ ಮೀರಿ ಕೆಲವರು ಹಿಜಾಬ್‌ಗ ಬೆಂಬಲ ಕೊಡುತ್ತಿದ್ದಾರೆ. ಈ ದೇಶದ ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ; ಮನಬಂದಂತೆ ನಡೆದುಕೊಳ್ಳುತ್ತೇವೆ ಅನ್ನುವುದನ್ನು ಸಾಬೀತು ಮಾಡಿದ್ದಾರೆ. . ಪೊಲೀಸರಿಗೆ, ಸರಕಾರಕ್ಕೆ ಗೌರವ ಕೊಡುವುದಿಲ್ಲ. ಪೊಲೀಸ್ ವ್ಯವಸ್ಥೆ ಮೇಲೆ ದೌರ್ಜನ್ಯ,ಪೊಲೀಸ್ ಠಾಣೆ ಮೇಲೆ ದಾಳಿ ಮಾಡುತ್ತಾರೆ ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋದು ನಮ್ಮ ಸಂಕಲ್ಪ ಎಂದರು.
ಭಾರತ ಎತ್ತ ಸಾಗುತ್ತಿದೆ ಎಂದು ಹಿಜಾಬ್ ಹೋರಾಟಗಾರ್ತಿ ಆಲಿಯಾ ಟ್ಟಿಟ್‌ಗೆ ಪ್ರತಿಕ್ರಿಯಿಸಿದ ಸಚಿವರು, ಭಾರತದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕು ಅನ್ನುವುದನ್ನು ನಾವು ಸಾರುತ್ತೇವೆ. ಭಾರತದಿಂದ ಬಿಟ್ಟು ಹೋದವರ ಪರಿಸ್ಥಿತಿ ಏನಾಗಿದೆ, ಅಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಇದೆ. ಭಾರತದಲ್ಲಿ ಎಲ್ಲರಿಗೂ ಊಟ, ಔಷಧ ಸಿಗುತ್ತಿದೆ ಎಂದರು.