Advertisement
ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಶೇ.90ರಷ್ಟು ಪೂರ್ಣಗೊಂಡಿದೆ. 115 ಕೋಟಿ ರೂ. ವೆಚ್ಚದಲ್ಲಿ 250 ಬೆಡ್ಗಳ ಆಸ್ಪತ್ರೆ ಇದಾಗಿದೆ. ಹೊಸ ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳು, ಒಳಾಂಗಣ ಹಾಗೂ ಇತರ ಸೌಲಭ್ಯಗಳಿಗೆ ಅನುದಾನದ ಅಗತ್ಯವಿದೆ. ವೈದ್ಯರು, ತಜ್ಞರು, ನಾನ್ ಮೆಡಿಕಲ್ ಸಿಬಂದಿ ನೇಮಕದ ಬಗ್ಗೆಯೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
Related Articles
ದೊಡ್ಡಣಗುಡ್ಡೆಯ ಚಕ್ರತೀರ್ಥದಲ್ಲಿ 2 ವರ್ಷಗಳ ಹಿಂದೆ ಸುಮಾರು 2 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಟ್ಟಡ ನಿರ್ಮಾಣ ಸಂಪೂರ್ಣಗೊಂಡಿದ್ದರೂ ಇದುವರೆಗೂ ಉದ್ಘಾಟನೆಯಾಗಿಲ್ಲ. ಕಟ್ಟಡ ಸಂಪೂರ್ಣಗೊಂಡು ಬಣ್ಣ ಬಳಿದು ಕಾಂಪೌಂಡ್ಗಳನ್ನೂ ಇಲ್ಲಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಪೊದೆಗಳು ಬೆಳೆದುನಿಂತಿದ್ದು, ಗಣಿ ಇಲಾಖೆಯ ಸಚಿವರ ಆಗಮನಕ್ಕೆ ಕಾಯುವಂತಿದೆ.
Advertisement