Advertisement

Heavy Rain ಬೈಕಂಪಾಡಿ: ಕಂಪೆನಿಗಳಿಗೆ ನುಗ್ಗಿದ ನೆರೆನೀರು

01:03 AM Aug 02, 2024 | Team Udayavani |

ಬೈಕಂಪಾಡಿ: ಇಲ್ಲಿನ ಕೈಗಾರಿಕೆ ಪ್ರದೇಶದ “ಮುಂಗಾರು’ ಬಳಿಯ ಅಡ್ಡ ರಸ್ತೆ 22, 23ರಲ್ಲಿರುವ ವಿದೇಶಗಳಿಗೆ ರಫ್ತು ಮಾಡುವ ಯಂತ್ರಗಳ ಯೂನಿಟ್‌, ಆಹಾರ ಸಂಸ್ಕರಣೆ ಯೂನಿಟ್‌ಗಳಿಗೆ ಸತತ ಮೂರು ದಿನಗಳಿಂದ ಪ್ರವಾಹ ನುಗ್ಗಿದ್ದು, ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.

Advertisement

ಭಾರೀ ನೆರೆಯ ಹಿನ್ನೆಲೆಯಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಇದರಿಂದ ಉತ್ಪಾದನ ಚಟುವಟಿಕೆಗೂ ನಷ್ಟವಾಗಿದೆ.

ಹಾಳಾದ ಸರಕಿನ ಮೌಲ್ಯವನ್ನು ಅಂದಾಜಿಸಲಾಗುತ್ತಿದೆ. ಕಾರ್ಮಿಕರು ಕೆಲಸವಿಲ್ಲದೆ ನೆರೆಯಲ್ಲಿ ಮುಳುಗಿದ ತಮ್ಮ ಕೊಠಡಿಗಳಿಂದ ಸ್ಥಳಾಂತರವಾಗುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next