Advertisement

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

11:14 PM Jan 03, 2025 | Team Udayavani |

ಭೋಪಾಲ್‌: 40 ವರ್ಷಗಳ ಹಿಂದೆ ಭೋಪಾಲ್‌ನಲ್ಲಿ ಅನಿಲ ದುರಂತಕ್ಕೆ ಕಾರಣವಾದ ಕಾರ್ಖಾನೆ ತ್ಯಾಜ್ಯವನ್ನು ಮಧ್ಯಪ್ರದೇಶದ ಧಾರ್‌ನ ಪೀಥಂಪುರದ ಕೈಗಾರಿಕ ಪ್ರದೇಶದಲ್ಲಿ ವಿಲೇವಾರಿ ಮಾಡಲು ಮಧ್ಯಪ್ರದೇಶ ಸರಕಾರ‌ ನಿರ್ಧರಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಶುಕ್ರವಾರ ಪೀಥಂಪುರ ಬಂದ್‌ಗೆ ಕರೆ ನೀಡಲಾಗಿತ್ತಲ್ಲದೆ ಈ ವೇಳೆ ಇಬ್ಬರು ವ್ಯಕ್ತಿಗಳು ತಮಗೇ ತಾವೇ ಬೆಂಕಿ ಹಚ್ಚಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಇದೇ ವೇಳೆ, ತ್ಯಾಜ್ಯದಲ್ಲಿ ಯಾವುದೇ ವಿಷಕಾರಿ ಅಂಶವಿಲ್ಲ. ಇದರಿಂದ ಪರಿಸರಕ್ಕೂ, ಸ್ಥಳೀಯರಿಗೂ ಅಪಾಯವಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

Advertisement

ಈಗಾಗಲೇ ಭೋಪಾಲ್‌ನಿಂದ 12 ಟನ್‌ಗಳಲ್ಲಿ ಸುಮಾರು 337 ಟನ್‌ನಷ್ಟು ಯೂನಿಯನ್‌ ಕಾರ್ಬೈಡ್‌ನ‌ ತ್ಯಾಜ್ಯವನ್ನು ಪೀಥಂಪುರಕ್ಕೆ ತರಲಾಗಿದೆ.

ವಿಲೇವಾರಿಗೆ ಆದೇಶವೇಕೆ?
ಕಾರ್ಖಾನೆಯಲ್ಲಿ ದಶಕಗಳಿಂದ ಸಂಗ್ರ ಹವಾದ ತ್ಯಾಜ್ಯ ನಿಧಾನಗತಿಯಲ್ಲಿ ಭೋಪಾಲ್‌ ಪರಿಸರದಲ್ಲಿ ಬೆರೆಯುತ್ತಿದ್ದು, ಅಂತರ್ಜಲ ಹಾಗೂ ಮಣ್ಣು ವಿಷಕಾರಿಯಾಗುತ್ತಿದೆ ಎಂದು ಅಲ್ಲಿನ ಪರಿಸರವಾದಿ ಗಳು ಕಾನೂನು ಹೋರಾಟ ಆರಂಭಿಸಿದರು. ಬಳಿಕ ಹೈಕೋರ್ಟ್‌ ಕಳೆದ ಡಿ.3 ರಂದು 4 ವಾರಗಳೊಳಗೆ ತ್ಯಾಜ್ಯ ವಿಲೇವಾರಿ ಮಾಡ ಬೇಕೆಂದು ಸರಕಾರ‌ಕ್ಕೆ ಸೂಚಿಸಿತ್ತು. ರಾಜ್ಯದಲ್ಲಿ ಕೈಗಾರಿಕ ತ್ಯಾಜ್ಯಗಳ ವಿಲೇವಾರಿಯ ಅತ್ಯಾಧುನಿಕ ಘಟಕ ಇರುವುದು ಪೀಥಂಪುರದಲ್ಲಿ ಮಾತ್ರ. ಹಾಗಾಗಿ ತ್ಯಾಜ್ಯ ವಿಲೇವಾರಿಗೆ ಈ ಸ್ಥಳ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next