Advertisement

ನಿಮ್ಮ ಬಳಿ ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ; ಅಮಿತ್ ಶಾ ಸವಾಲು

03:47 PM Oct 13, 2017 | Team Udayavani |

ನವದೆಹಲಿ: ಪುತ್ರ ಜಯ್ ಶಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಜ್ ತಕ್  ನ್ಯೂಸ್ ಚಾನೆಲ್ ನಡೆಸಿದ ಮಾತುಕತೆಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.

Advertisement

ಜಯ್ ಶಾ ಮಾಲಿಕತ್ವದ ಸಂಸ್ಥೆಯೊಂದು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ವ್ಯವಹಾರ ವೃದ್ಧಿಸಿಕೊಂಡಿದೆ ಎಂದು ದ ವೈರ್ ಇಂಗ್ಲೀಷ್ ಜಾಲತಾಣವು ವಿಸ್ತೃತ ವರದಿ ಪ್ರಕಟಿಸಿತ್ತು. ಕಾಂಗ್ರೆಸ್ ಪಕ್ಷವು ಈ ಪ್ರಕರಣವನ್ನು ಕೈಗೆತ್ತಿಕೊಂಡು ಬಿಜೆಪಿ ವಿರುದ್ಧ ವಾಕ್’ಪ್ರಹಾರ ನಡೆಸಿತ್ತು.

‘ಒಂದು ವೇಳೆ ನಿಮ್ಮ ಬಳಿ ದಾಖಲೆ ಇದ್ದರೆ ನಿಮ್ಮ ಆರೋಪವನ್ನು ಸಾಬೀತುಪಡಿಸಿ, ಕೋರ್ಟ್ ಕಟಕಟೆಗೆ ಹತ್ತಿಸಿ. ಕೇವಲ ನನ್ನ ಮಗನ ಕಂಪನಿ ಅಲ್ಲ, ಸರ್ಕಾರದಿಂದಾಗಲಿ ಅಥವಾ ಬೋಪೋರ್ಸ್ ನಂತಹ ಪ್ರಕರಣಗಳಲ್ಲಿ ಒಂದೇ ಒಂದು ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದಿದ್ದರೂ ಕೂಡಾ ಸಾಬೀತುಪಡಿಸಿ ಎಂದು ಶಾ ಸವಾಲು ಹಾಕಿದ್ದಾರೆ.

ಶಾ ಪುತ್ರನ ವಿರುದ್ಧ ಸುದ್ದಿ ಪ್ರಕಟಿಸಿದ ಇಂಗ್ಲಿಷ್ ಜಾಲತಾಣದ ವಿರುದ್ಧ ಜಯ್ ಶಾ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next