Advertisement

ಕೇಂದ್ರ ಸಚಿವ ಸಿಂಧಿಯಾ ವಿರುದ್ಧ ಟೀಕೆ: ಕ್ಷಮೆ ಕೋರಿದ ಸಂಸದ ಕಲ್ಯಾಣ್‌

02:07 AM Dec 13, 2024 | Team Udayavani |

ಹೊಸದಿಲ್ಲಿ: ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು “ಲೇಡಿ ಕಿಲ್ಲರ್‌’ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಲಿಖಿತ ರೂಪದಲ್ಲಿ ಕ್ಷಮೆ ಕೋರಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆಯೇ ಟಿಎಂಸಿ ಸಂಸದ ಹೇಳಿದ್ದ ಮಾತಿನ ಬಗ್ಗೆ ಬಿಜೆಪಿ ನೇತೃ­ತ್ವದ ಎನ್‌ಡಿಎ ಸಂಸದರು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸ್ಪೀಕರ್‌, “ಬುಧವಾರ ಸದನದಲ್ಲಿ ನಡೆ ದಿದ್ದ ಘಟನೆ ದುರದೃಷ್ಟಕರ. ಈ ವಿಚಾರಕ್ಕೆ ಸಂಬಂಧಪಟ್ಟ ಸದಸ್ಯರು ಈಗಾಗಲೇ ಸದನಕ್ಕೆ ಕ್ಷಮೆ ಕೇಳಿದ್ದು, ನನಗೆ ಕ್ಷಮಾಪಣಾ ಪತ್ರ ಸಲ್ಲಿಸಿದ್ದಾರೆ’ ಎಂದು ಬ್ಯಾನರ್ಜಿ ಹೆಸರು ಪ್ರಸ್ತಾವಿಸದೇ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next