ನವದೆಹಲಿ: ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕೆಂದು ಅಮೆರಿಕ ತೆರಳಲು ಸಿದ್ಧರಾಗಿರುವವರಿಗೆ ನೀಡಲಾಗುವ ಎಚ್-1ಬಿ ವೀಸಾ 2023ನೇ ಸಾಲಿನ ವೀಸಾ ನೋಂದಣಿ ಮಾ. 1ರಿಂದ ಆರಂಭವಾಗಲಿದೆ.
ಮಾ. 18ರವರೆಗೆ ನೋಂದಣಿ ನಡೆಸಿಕೊಳ್ಳುವುದಾಗಿ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಕೇಂದ್ರ (ಯುಎಸ್‌ಸಿಐಎಸ್) ತಿಳಿಸಿದೆ.
ಆನ್‌ಲೈನ್ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ನೋಂದಣಿಗೆ ದೃಢೀಕರಣ ಸಂಖ್ಯೆಯೊಂದನ್ನು ಕೊಡಲಾಗುತ್ತದೆ. ಆ ಸಂಖ್ಯೆಯನ್ನು ಬಳಸಿಕೊಂಡು ನೀವು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ:ಚುನಾವಣೆ ಬಂದಾಗ ಕಾಂಗ್ರೆಸ್ ಗೆ ಸಶಸ್ತ್ರ ಪಡೆಗಳ ಮೇಲೆ ಪ್ರೀತಿ : ಪ್ರಹ್ಲಾದ್ ಜೋಶಿ
ಎಚ್-1ಬಿ ವೀಸಾ ಸೌಲಭ್ಯವು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಪರಿಣತಿ ಇರುವವರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರತಿವರ್ಷ ಅಮೆರಿಕ 65 ಸಾವಿರ ಎಚ್-1ಬಿ ವೀಸಾ ಕೊಡುತ್ತದೆ. ಹಾಗೂ ಅಮೆರಿಕದಲ್ಲೇ ಮಾಸ್ಟರ್ಸ್ ಮಾಡಿದವರಿಗಾಗಿ 20 ಸಾವಿರ ಹೆಚ್ಚುವರಿ ವೀಸಾ ಕೊಡುತ್ತದೆ.