Advertisement

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!

09:51 PM Nov 12, 2024 | Team Udayavani |

ಕೋಲ್ಕೊತಾ: ನೀವೇನಾದ್ರೂ ಅಮೆರಿಕಕ್ಕೆ ರಜೆಗಾಗಿಯೋ, ವ್ಯಾಪಾರಕ್ಕಾಗಿಯೋ ಹೋಗಲು ವೀಸಾ ಪಡೆಯಲು ಮುಂದಾಗಿದ್ದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.

Advertisement

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ಅಮೆರಿಕ ದೂತಾವಾಸ ಕಚೇರಿಯಲ್ಲಿ ವೀಸಾ ಅರ್ಜಿಗಳ ವಿಲೇವಾರಿಗೆ ಕಾಯುವ ಸಮಯ 500 ದಿನಗಳಾಗುತ್ತಿವೆ. ಅಂದರೆ, ಹೆಚ್ಚು ಕಡಿಮೆ 16 ತಿಂಗಳಷ್ಟು ಕಾಯಬೇಕಾಗುತ್ತದೆ. 2023ರಲ್ಲಿ 14 ಲಕ್ಷ ವೀಸಾ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿತ್ತು. ವಿಸಿಟರ್‌ ವೀಸಾ ಅರ್ಜಿಗಳಿಗಾಗಿ ಕಾಯುವ ಸಮಯವನ್ನು ಶೇ.75ರಷ್ಟು ಕಡಿಮೆ ಮಾಡಿದ್ದರೂ ಈಗಲೂ 16 ತಿಂಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.

ಚೆನ್ನೈನಲ್ಲಿ 486 ದಿನ, ಮುಂಬೈನಲ್ಲಿ 327, ದೆಹಲಿ 432 ಮತ್ತು ಹೈದರಾಬಾದ್‌ ದೂತಾವಾಸದಲ್ಲಿ 435 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next