Advertisement

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

12:58 AM Nov 23, 2024 | Team Udayavani |

ಹೊಸದಿಲ್ಲಿ: ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಲಂಚ ಪ್ರಕರಣ ಮತ್ತು ಷೇರು ವಂಚನೆ ಆರೋಪದಲ್ಲಿ ಅಮೆರಿಕದ ಕೋರ್ಟ್‌ ದೋಷನಿಗದಿ ಮಾಡಿದ ಬೆನ್ನಲ್ಲೇ ಅದಾನಿ ಕಂಪೆನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅದಾನಿ ಗ್ರೂಪ್‌ಗೆ ಹೊಸದಾಗಿ ಸಾಲ ವಿತರಣೆಯನ್ನು ಸ್ಥಗಿತಗೊಳಿಸಲು ಕೆಲವು ಜಾಗತಿಕ ಬ್ಯಾಂಕ್‌ಗಳು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

Advertisement

ಸದ್ಯಕ್ಕೆ ಅದಾನಿ ಸಮೂಹಕ್ಕೆ ಹೊಸದಾಗಿ ಸಾಲ
ವಿತರಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಾಗತಿಕ ಬ್ಯಾಂಕ್‌ವೊಂದರ ಅಧಿಕಾರಿ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ, ಭಾರತ ಮತ್ತು ವಿದೇಶಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿದ್ದ ಅದಾನಿ ಕಂಪೆ ನಿಗೆ ನಿಧಿ ಸಂಗ್ರಹವೇ ದೊಡ್ಡ ಸವಾಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಆರೋಪ ಸುಳ್ಳೆಂದ ಬಿಜೆಡಿ: ಇದೇ ವೇಳೆ ಅದಾನಿ ಗ್ರೂಪ್‌ನಿಂದ ಒಡಿಶಾ ಸರಕಾರ ಕೂಡ ಲಂಚ ಪಡೆದಿತ್ತು ಎಂಬ ಆರೋಪವನ್ನು ಬಿಜೆಡಿ ಶುಕ್ರವಾರ ತಳ್ಳಿಹಾಕಿದೆ. ಒಡಿಶಾದಲ್ಲಿ ನಾವು ವಿದ್ಯುತ್‌ ವಿತರಣೆಯನ್ನು ಖಾಸಗೀಕರಣಗೊಳಿಸಿದ್ದೇವೆ. ಹೀಗಾಗಿ ನಮ್ಮಲ್ಲಿ ವಿದ್ಯುತ್‌ ಸರಬರಾಜು ಹೊಣೆಯನ್ನು ಟಾಟಾ ಪವರ್‌ ಕಂಪೆನಿಯೇ ನಿರ್ವಹಿಸುತ್ತದೆ. ಲಂಚ ಪಡೆದಿದ್ದೇವೆ ಎಂಬುದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದೆ.

ಅದಾನಿಯಿಂದ ನಿಯಮ ಉಲ್ಲಂಘನೆ: ಸೆಬಿ ತನಿಖೆ
ಗೌತಮ್‌ ಅದಾನಿ ಅವರ ಅದಾನಿ ಗ್ರೀನ್‌ ಎನರ್ಜಿ ಕಂಪೆನಿಯು ಅಮೆರಿಕದ ಷೇರು ಹೂಡಿಕೆದಾರರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನಿಯಮ ಉಲ್ಲಂ ಸಿದ್ದು ನಿಜವೇ ಎಂಬ ಕುರಿತು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸತ್ಯಶೋಧನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 2 ವಾರ ತಗಲಲಿದ್ದು, ಆ ಬಳಿಕ ಅಧಿಕೃತ ತನಿಖೆ ಆರಂಭಿಸಬೇಕೇ ಬೇಡವೇ ಎಂದು ಸೆಬಿ ನಿರ್ಧರಿಸಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಗನ್‌ ರೆಡ್ಡಿ ಆಂಧ್ರವನ್ನೇ ಅದಾನಿಗೆ “ಬ್ಲ್ಯಾಂಕ್‌ ಚೆಕ್‌’ನ ರೂಪದಲ್ಲಿ ನೀಡುವ ಮೂಲಕ ಆಂಧ್ರಪ್ರದೇಶವನ್ನು “ಅದಾನಿ ಪ್ರದೇಶ’ವಾಗಿ ಮಾರ್ಪಾಟು ಮಾಡಿದರು.
-ವೈ.ಎಸ್‌. ಶರ್ಮಿಳಾ,ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next