ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಮತದಾನ ನಡೆಯಲಿದೆ. ಡೆಮಾ ಕ್ರಾಟ್ ಪಕ್ಷದಿಂದ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣದಲ್ಲಿ ಇದ್ದು, ಬಿರುಸಿನ ಪ್ರಚಾರ ನಡೆಸಿದ್ದಾರೆ.
ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ನಿಕಟ ಪೈಪೋಟಿ ಏರ್ಪಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಅಥವಾ ಕಮಲಾ ಹ್ಯಾರಿಸ್‌ಗೆ ಅಧ್ಯಕ್ಷ ಸ್ಥಾನಕ್ಕೆ ಏರಲು 270 ಮತಗಳು ಬೇಕಾಗುತ್ತವೆ.
ಮಂಗಳವಾರ ಅಮೆರಿಕ ಕಾಲಮಾನ ಬೆಳಗ್ಗೆ 6ರಿಂದ ರಾತ್ರಿ 8ರ ವರೆಗೆ (ಭಾರತೀಯ ಕಾಲಮಾನ ನ. 5ರ ಸಂಜೆ 4.30ರಿಂದ ನ.6ರ ಬೆಳಗ್ಗೆ 6.30ರ ವರೆಗೆ) ಹಕ್ಕು ಚಲಾಯಿಸಲು ಅವಕಾಶ ಇದೆ. ಅಮೆರಿಕದಲ್ಲಿ ಮತದಾನ ಮುಕ್ತಾಯವಾದ ಕೂಡಲೇ ಮತಗಳ ಎಣಿಕೆ ಆರಂಭವಾಗಲಿದೆ.
ಈಗಾಗಲೇ 7.50 ಕೋಟಿ ಅಮೆರಿಕನ್ನರು ಇಮೇಲ್ ಮೂಲಕ ಹಕ್ಕು ಚಲಾಯಿಸಿದ್ದಾರೆ. ಉಳಿದವರು ಮಂಗಳವಾರ ಮತಗಟ್ಟೆಗೆ ಬಂದು ಮತ ಚಲಾ ವಣೆ ಮಾಡಲಿದ್ದಾರೆ.
ಗುರುತಿನ ಚೀಟಿ ಕಡ್ಡಾಯಕ್ಕೆ ಟ್ರಂಪ್ ಆಗ್ರಹ
ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಮಾತನಾಡಿದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಚುನಾ ವಣ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮತದಾನಕ್ಕೆ ಗುರುತಿನ ಚೀಟಿ ಕಡ್ಡಾಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.