Advertisement

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

12:26 AM Nov 06, 2024 | Team Udayavani |

ವಾಷಿಂಗ್ಟನ್‌: ಅಮೆರಿಕದ ಮುಂದಿನ ಅಧ್ಯಕ್ಷ  ಗಾದಿಗೆ ಏರಲು ಕಮಲಾ ಹ್ಯಾರಿಸ್‌ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಅಮೆರಿಕದ ಮಾಧ್ಯಮಗಳ ಸಮೀಕ್ಷೆಯ ಪ್ರಕಾರ ಕಮಲಾ ಕೂದಲೆಳೆ ಅಂತರದಲ್ಲಿ ಜಯ ಸಾಧಿಸುವ ನಿರೀಕ್ಷೆ ಇದೆ. ಮತ ಪತ್ರ ಬಳಸಿ ಚುನಾವಣೆ ನಡೆಸುತ್ತಿರು ವುದರಿಂದ ಅಂತಿಮ ಫ‌ಲಿತಾಂಶ ಪ್ರಕಟ ತಡವಾಗಲಿದೆ ಎಂದು ವರದಿಗಳು ತಿಳಿಸಿವೆ.

Advertisement

ಸುಮಾರು 24.3 ಕೋಟಿ ಮಂದಿ ಮತದಾರರಿದ್ದು, ನ. 2ರ ವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್‌ ಮೂಲಕ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲೋರಿಡಾ ವಿ.ವಿ. ತಿಳಿಸಿದೆ.

ಅಮೆರಿಕದಲ್ಲಿ ಈಗಾಗಲೇ ಹಲವು ಮಾಧ್ಯಮಗಳು ಸಮೀಕ್ಷೆ ನಡೆಸಿದ್ದು, ಹೆಚ್ಚಿನ ಸಮೀಕ್ಷೆಗಳು ಕಮಲಾ ಪರವಾಗಿವೆ.

ನಿರ್ಣಾಯಕ ರಾಜ್ಯಗಳಲ್ಲಿ ಅಬ್ಬರದ ಪ್ರಚಾರ
ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕ ಎಂದು ಕರೆಸಿಕೊಳ್ಳುವ ಪೆನ್ಸಿಲ್ವೇನಿಯಾ, ಮಿಚಿಗನ್‌, ವಿಸ್ಕಾನ್‌ಸಿನ್‌, ನೆವಡಾ, ಜಾರ್ಜಿಯಾ, ಅರಿಜೋನಾ ಮತ್ತು ಉತ್ತರ ಕೆರೋಲಿನಾಗಳಲ್ಲಿ ಇಬ್ಬರೂ ಅಭ್ಯರ್ಥಿಗಳು ಕೊನೆಯ ಕ್ಷಣದ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕೊನೆಯ ದಿನದ ಕಮಲಾ ಪೆನ್ಸಿಲ್ವೇನಿಯಾದಲ್ಲಿ 5 ರ್ಯಾಲಿಗಳಲ್ಲಿ ಭಾಗಿಯಾಗಿದ್ದರೆ ಟ್ರಂಪ್‌ ಉತ್ತರ ಕ್ಯಾರೋಲಿನಾ, ಪೆನ್ಸಿಲ್ವೇನಿಯಾ, ಮಿಚಿಗನ್‌ನಲ್ಲಿ 4 ಸಮಾವೇಶ ನಡೆಸಿದ್ದಾರೆ.

ಕಮಲಾ ಪರ ಒಲವು
ನ್ಯೂಯಾರ್ಕ್‌ ಟೈಮ್ಸ್‌ ನಡೆಸಿರುವ ಸಮೀಕ್ಷೆಯ ಪ್ರಕಾರ ಅರಿಜೋನಾ ಹೊರತುಪಡಿಸಿ ಉಳಿದ ನಿರ್ಣಾಯಕ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ ಮುನ್ನಡೆಯಲ್ಲಿದ್ದಾರೆ. ಶೇ. 46ರಷ್ಟು ಮಂದಿ ಕಮಲಾ ಪರ ಒಲವು ತೋರಿದ್ದರೆ, ಶೇ. 43ರಷ್ಟು ಮಂದಿ ಟ್ರಂಪ್‌ ಪರವಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಫ‌ಲಿತಾಂಶ ಕಮಲಾ ಪರವಾಗಿ ಬಂದರೆ ಈ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಜತೆಗೆ ಅಮೆರಿಕದ ಅಧ್ಯಕ್ಷ ಗಾದಿಗೇರಿದ ಮೊದಲ ಮಹಿಳೆಯೂ ಆಗಲಿದ್ದಾರೆ.

Advertisement

ಡಿ. 10ಕ್ಕೆ ಮತ ಎಣಿಕೆ ಪೂರ್ಣ
ಮಂಗಳವಾರ (ಅಮೆರಿಕ ಕಾಲಮಾನ) ಅಮೆರಿಕದಲ್ಲಿ ಮತದಾನ ಮುಕ್ತಾಯವಾದರೂ ಅಂತಿಮ ಫ‌ಲಿತಾಂಶ ಘೋಷಣೆ ಡಿ. 10ರಂದು ನಡೆಯಲಿದೆ. ಮತ ಪತ್ರಗಳನ್ನು ಬಳಕೆ ಮಾಡಿ ಚುನಾವಣೆ ನಡೆಸಿರುವುದರಿಂದ ಇದರ ಎಣಿಕೆಗೆ ಹೆಚ್ಚಿನ ಸಮಯ ಬೇಕಿದ್ದು, 3 ದಿನಗಳ ಬಳಿಕ ಗೆಲ್ಲುವವರು ಯಾರು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

24.3 ಕೋಟಿ ಮತದಾರರು
-ಕಮಲಾ, ಟ್ರಂಪ್‌ ಭವಿಷ್ಯ ನಿರ್ಧರಿಸಲಿದ್ದಾರೆ 24.3 ಕೋಟಿ ಮತದಾರರು
-ಆನ್‌ಲೈನ್‌ ಆಗಿ ಹಕ್ಕು ಚಲಾಯಿಸಿದ 7.5 ಕೋಟಿಗೂ ಹೆಚ್ಚು ಜನ
-ಮತ ಪತ್ರ ಬಳಕೆ ಮಾಡಿದ ಕಾರಣ ಫ‌ಲಿತಾಂಶ ವಿಳಂಬ ಸಾಧ್ಯತೆ
-ಮತ ಎಣಿಕೆ ಪೂರ್ಣಗೊಳಿಸಲು ಡಿಸೆಂಬರ್‌ 10 ಅಂತಿಮ ದಿನ
-ಕೊನೇ ದಿನವೂ ಟ್ರಂಪ್‌, ಕಮಲಾ ಹ್ಯಾರಿಸ್‌ ಅಬ್ಬರದ ಪ್ರಚಾರ
-ಫ‌ಲಿತಾಂಶ ನಿರ್ಧರಿಸಲಿರುವ ಅಮೆರಿಕ 7 ನಿರ್ಣಾಯಕ ರಾಜ್ಯಗಳು

Advertisement

Udayavani is now on Telegram. Click here to join our channel and stay updated with the latest news.

Next