Advertisement

ಉಪಚುನಾವಣೆ: ಪಂಜಾಬ್‌,ಕೇರಳದಲ್ಲಿ ಬಿಜೆಪಿಗೆ ಭಾರೀ ಮುಖಭಂಗ 

12:43 PM Oct 15, 2017 | Team Udayavani |

ಗುರುದಾಸ್‌ಪುರ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆ ಫ‌ಲಿತಾಂಶ ಭಾನುವಾರ ಪ್ರಕಟಗೊಂಡಿದ್ದು,ಬಿಜೆಪಿ ಸ್ಥಾನ ಕಳೆದುಕೊಂಡು ಮುಖಭಂಗ ಅನುಭವಿಸಿದೆ. ಆಡಳಿತಾರೂಢ ಕಾಂಗ್ರೆಸ್‌ ಗೆದ್ದು ಸಂಭ್ರಮಿಸಿದೆ. 

Advertisement

ಬಿಜೆಪಿ ಸಂಸದ ವಿನೋದ್‌ ಖನ್ನಾ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು, ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖರ್‌ ಅವರು ಬಿಜೆಪಿ ಅಭ್ಯರ್ಥಿ ಸ್ವರಣ್‌ ಸಲಾರಿಯಾ ಅವರನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದಾರೆ. ಆಪ್‌ 3 ನೇ ಸ್ಥಾನ ಪಡೆದುಕೊಂಡಿದೆ. 

‘ಇದು ಮತದಾರರು ರೆಡ್‌ ರಿಬ್ಬನ್‌ನನಲ್ಲಿ ಕಟ್ಟಿ ಭವಿಷ್ಯದ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈಗೆ ನೀಡಿದ ದೊಡ್ಡ ದೀಪಾವಳಿ ಗಿಫ್ಟ್’ ಎಂದು ನವ್‌ಜೋತ್‌ ಸಿಧು ಹರ್ಷ ವ್ಯಕ್ತ ಪಡಿಸಿದ್ದಾರೆ. 

ಪಂಜಾಬ್‌ನಾದ್ಯಂತ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾರೆ. 

ಕೇರಳದಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ 

Advertisement

ವೆಂಗರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾ ರೂಢ ಎಡಪಕ್ಷ ಮತ್ತು ಬಿಜೆಪಿ ಮುಖಭಂಗ ಅನುಭವಿಸಿದ್ದು ಯುಡಿಎಫ್ ಮೈತ್ರಿಕೂಟ ಬೆಂಬಲಿತ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಕೆಎನ್‌ಎ ಖಾದರ್‌ ಅವರು 23,000 ಮತಗಳ ಅಂತರದಿಂದ  ಜಯಭೇರಿ ಬಾರಿಸಿದ್ದಾರೆ. ಎಡಪಕ್ಷ 2 ನೇ ಸ್ಥಾನ ಪಡೆದರೆ, ಎಸ್‌ಡಿಪಿಐ 3 ನೇ ಸ್ಥಾನ ಪಡೆದುಕೊಂಡಿದ್ದು , ನಾಲ್ಕನೇ ಸ್ಥಾನದಲ್ಲಿರುವ ಬಿಜೆಪಿ ಠೇವಣಿ ಕಳೆದುಕೊಂಡಿದೆ. 

ಐಎಎಮ್‌ಎಲ್‌ ನಾಯಕ ಪಿ.ಕೆ.ಕುನ್ಹಕುಟ್ಟಿ ಅವರು ಮಲ್ಲಪ್ಪುರಂ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಸಲುವಾಗಿ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರ ತೆರವಾಗಿ ಉಪಚುನಾವಣೆ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next