Advertisement

National record ಬರೆದ ಗುಲ್ವೀರ್‌ ಸಿಂಗ್‌:10 ಸಾವಿರ ಮೀಟರ್‌ ರೇಸ್‌

12:15 AM Mar 18, 2024 | Team Udayavani |

ಹೊಸದಿಲ್ಲಿ: ಕ್ಯಾಲಿಫೋರ್ನಿಯಾದ ಸ್ಯಾನ್‌ ಜುವಾನ್‌ ಕ್ಯಾಪಿಸ್ಟ್ರಾನೊದಲ್ಲಿ ನಡೆದ 10 ಸಾವಿರ ಮೀಟರ್‌ ರೇಸ್‌ನಲ್ಲಿ ಗುಲ್ವೀರ್‌ ಸಿಂಗ್‌ 16 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

Advertisement

ಏಷ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ ಗುಲ್ವೀರ್‌ ಸಿಂಗ್‌ ಈ ದೂರವನ್ನು 27:41.81 ಸೆಕೆಂಡ್‌ಗಳಲ್ಲಿ ಮುಗಿಸಿದರು. 2008ರಲ್ಲಿ ಸುರೇಂದ್ರ ಸಿಂಗ್‌ ನಿರ್ಮಿಸಿದ 28:02.89 ಸೆಕೆಂಡ್‌ಗಳ ದಾಖಲೆಯನ್ನು ಮುರಿದರು. ಆದರೆ ಗುಲ್ವಿàರ್‌ ಅವರ ಈ ಸಾಧನೆ ಒಲಿಂಪಿಕ್ಸ್‌ ಅರ್ಹತೆಯ ಗಡಿಯಿಂದ ದೂರವೇ ಉಳಿಯಿತು. ಇದರ ಮಾನದಂಡ 27:00.00 ಆಗಿದೆ.

ಕೂಟದ ಹೀಟ್‌ನಲ್ಲಿ ಭಾರತದ ಮತ್ತೋರ್ವ ರೇಸರ್‌ ಕಾರ್ತಿಕ್‌ ಕುಮಾರ್‌ 9ನೇ ಸ್ಥಾನಿಯಾದರು (28:01.90). ಇದು ಕೂಡ ಸುರೇಂದ್ರ ಸಿಂಗ್‌ ಅವರ ರಾಷ್ಟ್ರೀಯ ದಾಖಲೆಗಿಂತ ಉತ್ತಮವಾದ ಸಾಧನೆ ಆಗಿತ್ತು.

ವನಿತೆಯರ 10 ಸಾವಿರ ಮೀಟರ್‌ ರೇಸ್‌ನಲ್ಲಿ ಪಾರುಲ್‌ ಚೌಧರಿ 20ನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು (32:02.08). ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ 30:40.00 ಸೆಕೆಂಡ್ಸ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next