Advertisement
ಪ್ರಸ್ತುತ ವರ್ಷ ಜು. 25ರಂದು ಜಲಾಶಯ ಮೊದಲ ಬಾರಿ ಭರ್ತಿ ಯಾಗಿತ್ತು. ಅಂದಿನಿಂದ ಇಂದಿನವರೆಗೆ 157 ದಿನಗಳ ಕಾಲ ನಿರಂತರವಾಗಿ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. 2022 ರಲ್ಲಿ 114 ದಿನ ಹಾಗೂ 2009 ರಲ್ಲಿ 146 ದಿನ ಗರಿಷ್ಠ ಮಟ್ಟ ಕಾಯ್ದು ಕೊಂಡಿತ್ತು. 2021ರಲ್ಲೂ ನಿರಂತರ ವಾಗಿ ಭರ್ತಿಯಾಗಿದ್ದರೂ ಡಿಸೆಂಬರ್ ವೇಳೆಗೆ 124 ಅಡಿಗೆ ಇಳಿದಿತ್ತು. ಮುಂಗಾರು, ಹಿಂಗಾರು ಮಳೆ ಉತ್ತಮ ಕಾವೇರಿ ನದಿ ವ್ಯಾಪ್ತಿಯಲ್ಲಿ ಈ ಬಾರಿ ನಿರಂತರವಾಗಿ ಮಳೆ ಸುರಿದಿತ್ತು.
ಜಲಾಶಯ ತುಂಬಿದ್ದರಿಂದ ಜಿಲ್ಲೆಯ ಕೆರೆಕಟ್ಟೆ ಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗಿದೆ. ರೈತರ ಬೆಳೆಗೆ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿಗೂ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿ.ಪಂ. ವ್ಯಾಪ್ತಿಯ ಎಲ್ಲ ಕೆರೆಕಟ್ಟೆಗಳು ಶೇಕಡಾವಾರು ಭರ್ತಿಯಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Related Articles
ಜಲಾಶಯ ನಿರಂತರವಾಗಿ ಗರಿಷ್ಠ ಮಟ್ಟ ಕಾಯ್ದುಕೊಂಡ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿತ್ತು. ಇದರಿಂದ ತಮಿಳುನಾಡಿಗೆ 280 ಟಿಎಂಸಿ ನೀರು ಹರಿದಿದೆ. ತಮಿಳುನಾಡಿಗೆ ನೀರು ಹಂಚಿಕೆ ಆಧಾರದ ಮೇಲೆ 177.25 ಹರಿಸಬೇಕಿತ್ತು. ಆದರೆ 102.75 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿದೆ. ಜಿಲ್ಲೆಯ ರೈತರ ಬೆಳೆಗಳಿಗೆ ವಿಶ್ವೇಶ್ವರಯ್ಯ ಹಾಗೂ ಇತರ ನಾಲೆಗಳ ಮೂಲಕ ನೀರು ಹರಿಸಲಾಗಿದೆ.
Advertisement
ಈ ಬಾರಿ ಉತ್ತಮ ಮಳೆಯಾದದ್ದರಿಂದ ಜಲಾಶಯ ಭರ್ತಿಯಾಗಿದೆ. ಬೇಸಗೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ರೈತರ ಬೇಸಗೆ ಬೆಳೆಗೆ ನೀರು ಬಿಡುವ ಬಗ್ಗೆ ಐಸಿಸಿ ಸಭೆ ನಿರ್ಣಯ ಕೈಗೊಳ್ಳಲಿದೆ. ಶೇ. 99ರಷ್ಟು ಬೇಸಗೆ ಬೆಳೆಗೆ ನೀರು ಸಿಗುವ ಸಾಧ್ಯತೆ ಇದೆ. ಒಟ್ಟಾರೆ ಈ ಬಾರಿ ನೀರಿಗೆ ಸಮಸ್ಯೆ ಯಾಗುವುದಿಲ್ಲ.-ಕಿಶೋರ್, ಕಾರ್ಯಪಾಲಕ ಇಂಜಿನಿಯರ್, ಕೆಆರ್ಎಸ್ ಎಚ್. ಶಿವರಾಜು